ವಿಶ್ವ ಮಹಿಳಾ ದಿನಾಚರಣೆ. ದಿನಗಳ ಲೆಕ್ಕ ಹಾಕುತ್ತಾ ಹೊರಟರೆ ಇನ್ನು ಕೆಲವೇ ವರ್ಷಗಳಲ್ಲಿ ವರ್ಷದ ೩೬೫ ದಿನವೂ ವಿಶೇಷ ದಿನಗಳೇ ಆಗಿ ಸೇರುತ್ತವೆ ಎನ್ನುವ ಭಯವಿದೆ. ಆದರೂ ಕೆಲವೊಂದು ದಿನಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಅದು ತಾಯಂದಿರ ದಿನ ಇರಬಹುದು ಅಥವಾ ಹುಡುಗಿಯೊಬ್ಬಳ ಮನ ಕದಿಯಲು ಹೊರಟ ವ್ಯಾಲೆಂಟೈನ್ ಡೇ ಇರಬಹುದು.
ಅದೇ ರೀತಿ ಮಾ.೮ ವಿಶ್ವ ಮಹಿಳಾ ದಿನಾಚರಣೆ. ಮಹಿಳಾ ದಿನದ ಅಗತ್ಯತೆ ಇಂದಿನ ದಿನಗಳಲ್ಲಿ ಪ್ರಸ್ತುತವೇ ಎನ್ನುವ ವಿಚಾರವಾದಿಗಳನ್ನು ಮಂಥಿಸಲು ಹೊರಟಿಲ್ಲ. ಒಟ್ಟಿನಲ್ಲಿ ಎಲ್ಲ ದಿನಗಳಂತೆ ಮಹಿಳಾ ದಿನಕ್ಕೂ ಅದರದ್ದೇ ಆದ ಗೌರವ. ಆ ಹಿನ್ನೆಲೆಯಲ್ಲಾದರೂ ಆಕೆಯನ್ನು ನಾವು ಸ್ಮರಿಸಿ ಗೌರವಿಸುತ್ತೇವೆಲ್ಲಾ ಅದರಲ್ಲೇ ಆಕೆ ಧನ್ಯತೆಯನ್ನು ಪಡೆದುಕೊಳ್ಳುತ್ತಾಳೆ.
ಮಹಿಳೆಯನ್ನು ಇಲ್ಲಿ ‘ಆಕೆ’ ಎಂದು ಬಳಸುತ್ತಿರುವುದು ಬರವಣಿಗೆಯ ಓಘಕ್ಕೆ ಸಹಕಾರಿಯಾಗುತ್ತೆ ಎನ್ನುವ ಒಂದೇ ಕಾರಣಕ್ಕೆ.
ಆಕೆ ಮಮತಾಮಯಿ, ಸಹನಾಮೂರ್ತಿ, ಜೀವನದ ಕಷ್ಟಗಳಲ್ಲೂ ನಮ್ಮನ್ನು ಓಲೈಸಿ, ಒಲಿಸಿ ನಮ್ಮಲ್ಲಿ ಜೀವಜಲ ತುಂಬುವಾಕೆ. ಆಕೆಯಲ್ಲಿ ನಾನು ಅಮ್ಮನನ್ನು ಕಂಡೆ, ಅಕ್ಕನನ್ನು ಕಂಡೆ, ತಂಗಿಯ ಪ್ರೀತಿಯೂ ಸಿಕ್ಕಿದೆ, ಪ್ರಿಯತಮೆಯ ಮುದ್ದಾಟವೂ ಸೇರ್ಪಡೆಯಾಗಿದೆ, ಜತೆಗೆ ಬಾಳಸಂಗಾತಿಯ ಸರಸವನ್ನೂ ಪಡೆದೆ. ಒಟ್ಟಿನಲ್ಲಿ ಆಕೆ ಎನ್ನ ಪಾಲಿನ ದೇವತೆ ಎನ್ನುವುದಕ್ಕಿಂತ ಆಕೆ ಎನಗೆ ದೇವತೆಗಿಂತಲೂ ಹೆಚ್ಚಿನ ಭಾಗ್ಯವನ್ನು ಕರುಣಿಸಿದವಳು. ಆಕೆಯನ್ನು ಮೇಲೆ ಹೇಳಿದ ಯಾವುದಾದರೂ ಒಂದು ವರ್ಗಕ್ಕೆ ಸೀಮಿತಗೊಳಿಸಿದರೆ ಆಕೆ ಸಿಟ್ಟು ಮಾಡಿಕೊಳ್ಳುತ್ತಾಳೆ. ಆಕೆಯಲ್ಲಿ ವಾತ್ಸಲ್ಯಭರಿತ ಸಾಂತ್ವನವಿದೆ. ಬಿದ್ದ ಕಂದನ ಎತ್ತಿ ಜಾಗರೂಕತೆಯಿಂದ ಮುನ್ನಡೆಸುವ ಚಾಕಚಕ್ಯತೆಯಿದೆ. ಆಕೆ ಪ್ರತಿದಿನ ನೆನಪಿನ ಗೋಪುರಗಳನ್ನು ನಿರ್ಮಿಸಿ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾಳೆ. ಆಕೆಯ ಪ್ರೀತಿ ಅನುಭವಿಸಿದವರು ಎಂದೂ ಆಕೆಯನ್ನು ದೂರುವುದಿಲ್ಲ. ಕೋಪದಲ್ಲೂ ಆಕೆ ಅರಳುತ್ತಾಳೆ, ಕಣ್ಣೀರಿಗೆ ಜತೆಗಾತಿಯಾಗುತ್ತಾಳೆ.

ಎಲ್ಲೂ ಯಾವುದಕ್ಕೂ ಕೆಟ್ಟದ್ದನ್ನು ಬಯಸಿದವಳಲ್ಲ. ಆಕೆಯ ಮಾತಿನಲ್ಲಿ ಕೊಂಕು, ದಾರ್ಷ್ಟ್ಯತನವನ್ನ ಎಂದೂ ಕಂಡಿಲ್ಲ. ಆಕೆ ಎಲ್ಲಿಂದಲೋ ಬಂದು ಎನ್ನ ಅಪ್ಪಿದವಳು, ಮುದ್ದಾಡಿದವಳು, ಈಗಲೂ ಸುಂದರ ಪ್ರೀತಿ ಉಕ್ಕಿ ಹರಿಸುತ್ತಾಳೆ. ಫೋನಲ್ಲಿ ಮಾತಿಗೆ ಸಿಕ್ಕಿದರೆ ಮಾತಿನ ಸರಸಿ. ಎಲ್ಲವನ್ನೂ ಒಂದೇ ಏಟಿಗೆ ಸರಿಪಡಿಸುವಂತಹ ಶಕ್ತಿ ಆಕೆಯಲ್ಲಿದೆ. ಆದಕ್ಕೆ ಆಕೆ ಎನ್ನ ನಾಡಿಯ ಮಿಡಿತ, ಎನ್ನ ಹೃದಯದ ಸಂಗೀತ ಸಾಮ್ರಾಜ್ಞಿ. ಎಲ್ಲೋ ಕಳೆದು ಹೋಗಿದ್ದ ಗತವನ್ನು ನೆನಪಿಸಿ ಎಲ್ಲದರಲ್ಲೂ ಭಾಗಿಯಾಗುತ್ತಾಳೆ. ಈಗ ಬಿಟ್ಟು ಹೋಗ್ತಾಳೆ ಎಂದಾಕ್ಷಣದ ಮರುದಿನವೇ ನೀನಿಲ್ಲದೆನಗ್ಯಾರು ಎಂದು ಅವಳಾಗೇ ಪ್ರಶ್ನಿಸುತ್ತಾಳೆ. ಅದಕ್ಕೇ ಆಕೆ ಇಷ್ಟವಾಗುತ್ತಾಳೆ. ಎಲ್ಲೂ ಯಾರಿಗೂ ಸಿಗದ ಸಂಭ್ರಮ ಎನ್ನ ಪಾಲಿಗೆ ಆಕೆಯಿಂದ ಲಭಿಸಿದೆ. ಅದಕ್ಕೇ ನಾ ಹೇಳಿದ್ದು ಆಕೆಯನ್ನು ತಾಯಿ, ಅಕ್ಕ, ತಂಗಿ, ನಾದಿನಿ ಎಂದು ವಿಂಗಡಿಸಲಾಗಿದೆ. ಆಕೆ ಸ್ತ್ರೀರೂಪದಲ್ಲಿರುವ ಅದೃಷ್ಟ ದೇವತೆ. ಒಟ್ಟಿನಲ್ಲಿ ಆಕೆ ಸ್ತ್ರೀ. ಅವಳಿಲ್ಲಾಂದ್ರೆ ನಾನಿಂದು ಈ ಜೀವನ ನಡೆಸಲು ಸಾಧ್ಯವೇ ಇರಲಿಲ್ಲ. ಆಕೆಯನ್ನು ಧೇನಿಸುತ್ತಾ ಧ್ಯಾನಿಸುವುದರಲ್ಲೇ ಆರಾಧನೆಯಿದೆ. ಆಕೆಯನ್ನು ನೆನಪಿಸಿಕೊಳ್ಳುವುದರಲ್ಲೇ ಕಳೆದುಹೋದ ಎಲ್ಲವನ್ನೂ ಪಡೆಯುವ ಶಕ್ತಿಯಿದೆ. ಆಕೆಯ ಬಗ್ಗೆ ಎಷ್ಟು ಬರೆದರೂ ಕಡಮೆಯೇ.
ಅದಕ್ಕೇ ಇತಿಶ್ರೀ...!!!
No comments:
Post a Comment