ಕೃಷ್ಣಾ, ಕೃಷ್ಣಾ ಕೃಷ್ಣಾ...
ನಿನ್ನ ಹೆಸರ ಹಿಡಿದು ಭಕ್ತ ಸಮೂಹವನ್ನೇ ಹಿಂಡಿ ಹಿಪ್ಪೆ ಮಾಡಿ ಬಿಟ್ಟರಲ್ಲೋ ಯತಿಗಳು. ಭಕ್ತರಾದ ನನ್ನಂತವರಿಗೆ ಮನಸ್ಸಿನ ಶಾಂತಿಗೆ ಬೇಕಾಗಿದ್ದು ನಿನ್ನ ಸನ್ನಿಧಿಯಲ್ಲದೆ ಬೇರೆ ‘ಪರ್ಯಾಯ’ ಅಲ್ಲ. ಆದರೆ ಇದೇ ಪರ್ಯಾಯ ಹಿಡಿದು ಸ್ವಾಮೀಜಿಗಳು ಆಟವಾಡಿದ್ದೋ ಆಡಿದ್ದು.
ಯಾಕೋ ಗೊತ್ತಿಲ್ಲ ಕಣೋ ನಮ್ಮ ಕಷ್ಟದ ದಿನಗಳಲ್ಲಿ ಮನಸ್ಸಿನ ದುಗುಡ ಕಳೆಯಲು ಮಾಡಿದ ನಿನ್ನ ಕ್ಷೇತ್ರ ದರ್ಶನವೇ ಭಾರಿ ಚೇತರಿಕೆ ನೀಡಿತ್ತು. ಇಂದಿಗೂ ಆ ದಿನಗಳು ಸರಿಯಾಗಿ ನೆನಪಾಗುತ್ತಿದೆ. ನಿನ್ನ ಎದುರುಗಡೆಯೇ ಇರುವ ಕನಕನ ಕಿಂಡಿಯ ಬಲಭಾಗದಲ್ಲಿ ಕುಳಿತು ಸರಿ ಸುಮಾರು ಎರಡೂವರೆ ಗಂಟೆ ಏಕಾಗ್ರತೆಯಿಂದ ಧ್ಯಾನಿಸಿದ್ದೆ. ನಿನ್ನ ನೋಡಲು ಬಂದರೆ ನಾವು ಕನಿಷ್ಟ ಎರಡು ಗಂಟೆ ಅಲ್ಲಿ ನಿನ್ನ ಸೇವೆ ಮಾಡದೆ ಬಂದವರಲ್ಲ. ಬರುವುದಕ್ಕೆ ಮನಸ್ಸೂ ಒಫ್ಪುವುದಿಲ್ಲ.
ಅದರಲ್ಲೂ ಭಾನುವಾರದ ವಜ್ರಖಚಿತ ನಿನ್ನ ನಿಲುವು, ಎಷ್ಟು ಕಣ್ಣು ತುಂಬಿಕೊಂಡರೂ ಸಾಲದು. ಅಂತಹ ಶಾಂತಿ ದೂತ ನೀನು. ಶಾಂತಿ ಮಂತ್ರವ ಜಪಿಸುತ್ತಾ ನಿನ್ನ ಸನ್ನಿಧಿಯಲ್ಲಿ ಶಾಂತಿಯನ್ನು ಕಂಡವರು ನಾವು. ಆದರೆ, ಇಂದು ಟಿವಿ, ಪತ್ರಿಕೆ ಎಲ್ಲೆಂದರಲ್ಲಿ ಇದೇ ಮಾತು. ಯಾಕೆ ಹೀಗೆ?
ಒಂದೆಡೆ ಕೃಷ್ಣ ಲೀಲೆ ನಡೆಯಲಿಲ್ಲ ಎಂದರೆ ಇನ್ನೊಂದೆಡೆ ಯತಿಗಳ ನಡುವಣ ವಾಕ್ಸಮರ. ಎರಡರ ನಡುವೆ ಸಿಲುಕಿದವರು ನಮ್ಮಂತಹ ಭಕ್ತರು ಕಣೋ. ನಿನ್ನ ಲೀಲೆ ನಡೆಯಲಿಲ್ಲ ಎಂದು ಕೆಲವರು ಹೇಳಿದರೂ ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲಿಲ್ಲ.
ಉಡುಪಿ ಎಂದರೆ ಕೃಷ್ಣನ ನೆನಪುಗಳೇ ಬರುತ್ತವೆಯೇ ಹೊರತು ಪರ್ಯಾಯವಲ್ಲ. ಅಷ್ಟಕ್ಕೂ ನಿನ್ನನ್ನು ಮುಟ್ಟಿಯೋ, ಮುಟ್ಟದೆಯೋ ಯಾವ ರೀತಿ ಪೂಜಿಸಿದರೂ ನಮಗೆ ಯಾವುದೇ ತೊಂದರೆಯಿಲ್ಲ. ಒಟ್ಟಿನಲ್ಲಿ ನಿನಗೆ ಸಲ್ಲಿಸುವ ಸೇವೆ ಸಲ್ಲಬೇಕು. ಅದಕ್ಕೆ ಬರುತ್ತೇವೆ ಹೊರತು ಈ ಸ್ವಾಮಿಗಳು ಹೇಳುವುದನ್ನು ಕೇಳಲೂ ಅಲ್ಲ, ನೋಡಲೂ ಅಲ್ಲ. ಅಷ್ಟಕ್ಕೂ ನಿನಗೆ ಪೂಜೆ ಯಾರು ಸಲ್ಲಿಸಿದರೇನು? ನಮ್ಮ ಭಕ್ತಿ ಸದಾ ಇದ್ದ ಹಾಗೆಯೇ ಇರುತ್ತದೆ. ಆದರೂ ಕೊನೆಯಲ್ಲಿ ಎಲ್ಲರೂ ಹೇಳುವುದು ಒಂದೇ, ಸ್ವಾಮೀಜಿಗಳು, ಯತಿಗಳು ಹಾಗೂ ಇತರರಿಂದಾಗಿ ನಮ್ಮ ಸುಂದರ ಉಡುಪಿ ಕೆಟ್ಟಿತು.ಅಷ್ಟಕ್ಕೂ ಯಾವತ್ತೋ ಒಂದು ದಿನ ನಡೆಯುವ ಪರ್ಯಾಯದಿಂದ ಅದು ಸಾಧ್ಯವೇ? ಪೂಜೆ ಸಂಸ್ಕೃತಿ ಎಲ್ಲವನ್ನೂ ನಾವು ಗೌರವಿಸುತ್ತೇವೆ.
ಆದರೆ ಒಂದು ಪೂಜೆಗಾಗಿ ನಿನ್ನ ಹೆಸರಿನಲ್ಲಿ ಈ ರೀತಿಯ ವಿವಾದ ನಡೆಯದಿರಲಿ. ಉಲ್ಲಂಘನೆಯ ಪೂಜೆಯೋ, ನಿನ್ನ ಮುಟ್ಟಿ ಮಾಡುವ ಪೂಜೆಯೋ ಯಾವುದಾದರೂ ಸರಿ ಅದು ಯಾವತ್ತಿಗೂ ಸುಂದರವಾಗಿ ಸುರಳೀತವಾಗಿ ನಡೆಯಲಿ. ಅದಕ್ಕೆ ಇಷ್ಟೆಲ್ಲಾ ಗದ್ದಲ ಯಾಕೆ. ಉತ್ತರ ಹೇಳುವವರಿಲ್ಲ. ಪ್ರಶ್ನೆ ಕೇಳಿದರೆ ಅದೂ ವಿವಾದವಾಗಿಯೇ ಹೋಗುತ್ತದೆ. ಅದಕ್ಕೇ ನಾವು ನಮ್ಮೊಡನೆ, ನಮ್ಮೊಳಗೆ ಹಾರೈಸುವುದೊಂದೇ. ‘ಆದುದಕ್ಕೆ, ಆಗದಿದ್ದುದಕ್ಕೆ ಕೃಷ್ಣನಿದ್ದ, ಎಂದಿಗೂ ಇರುವ....’

1 comment:
ಸಾಗರ ಲಂಘಿಸಿದ ಸ್ವಾಮಿಗಳು ಪೂಜೆ ಮಾಡುವುದು ಸರಿಯಲ್ಲ ಎಂದವರ ಮಾತಿಗೆ ತೆರೆ ಬಿದ್ದಿದೆ.
ಒಲವಿನಿಂದ
ಬಾನಾಡಿ.
(ಚೇವಾರ್ ಚೆನ್ನಾಗಿದೆ. ಮಂಗಳೂರಲ್ಲಿ ಕದ್ರಿ ಜಾತ್ರೆ ಮುಗಿಯಿತು. ಮತ್ತೆ ಬಾ.)
Post a Comment