Monday, January 07, 2008

ಬದಲಾಗು ನೀನು....

ಎಲ್ಲೋ ಒಂದೆಡೆ ಜೀವನವೇ ಬದಲಾಗುತ್ತೇನೋ ಎಂಬ ಭ್ರಮೆ. ಇನ್ನೊಂದೆಡೆ ಯಾರೂ ಬದಲಾದರೂ ನಾನು ಕೆಲವು ವಿಷಯಗಳಲ್ಲಿ ಬದಲಾಗಲ್ಲ ಎನ್ನುವ ಹಠಮಾರಿ ನಿಲುವು. ಇದರಿಂದಾಗಿ ಒಂದಷ್ಟು ನೋವು ಅನುಭವಿಸಿದ್ದೇನೆ ಎನ್ನುವುದು ಬಿಟ್ಟರೆ ಏನೂ ಆಗಿಲ್ಲ. ಜೀವನವೇ ಹಾಗೆ. ಕಳೆದ 23 ವರುಷಗಳಲ್ಲಿ ಇಂತಹ ಹಲವು ಪರಿಸ್ಥಿತಿಯನ್ನು ಹಾದು ಬಂದಿದ್ದೇನೆ. ಕೆಲವು ವಿಷಯಗಳಲ್ಲಿ ಬದಲಾಗಿಲ್ಲ. ಇನ್ನು ಕೆಲವು ವಿಷಯಗಳಲ್ಲಿ ಎಷ್ಟು ವೇಗವಾಗಿ ಸಾಧ್ಯವೋ ಅಷ್ಟು ಶೀಘ್ರವಾಗಿ ಬದಲಾವಣೆಗೆ ಒಗ್ಗಿದ್ದೇನೆ. ಕೆಲವನ್ನು ಬಿಡಬೇಕೆಂದರೂ ಬಿಡಲಾಗಿಲ್ಲ.


ಅದಕ್ಕೆ ಕೆಲವರು ಅಹಂಕಾರ ಎಂದರು. ಕೆಲವರು ego ಎಂದು ಜರೆದರು. ಆದ್ರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಕೆಲವೊಂದು ಬಾರಿ ನಾನು ಮಾಡುವುದು ಸರಿಯಲ್ಲ ಎಂಬ ಭಾವವೂ ಕಾಡುತ್ತವೆ. ಆದರೆ ಕುಳಿತು ಯೋಚನೆ ಮಾಡುವಾಗ ಅದು ದೊಡ್ಡ ತಪ್ಪು ಎನಿಸುವುದಿಲ್ಲ. ಅದಕ್ಕೆ ಮತ್ತೆ ಅಂತಹ ಕೆಲವು ಕೆಲಸಗಳನ್ನು ಮಾಡುತ್ತೇನೆ. ಮನೆಗೆ ಹೋದರೆ ಕಸಿನ್ ಬಯ್ತಾಳೆ. ನೀನು ಎಷ್ಟು ಸಲ ಜನ್ಮ ವೆತ್ತಿ ಬಂದರೂ ಉದ್ಧಾರ ಆಗಲ್ಲ ಎನ್ನುತ್ತಾಳೆ. ನಾನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ಹೌದು ನಿಮ್ಮಿಂದ ಯಾರಿಂದಲೂ ನನ್ನ ಬದಲಾಯಿಸೋಕೆ ಸಾಧ್ಯವಿಲ್ಲ. ಅವಳು ಮತ್ತೆ ಯಾರು ಬರಬೇಕು ಅಂತ ಕೇಳ್ತಾಳೆ ಬದಲಾಗೋಕೆ. ಯಾರು ಬಂದರೂ ಬದಲಾಗೋಲ್ಲ ನಾನು ಅಂತೀನಿ. ಅವಳಿಗೆ ಸಿಟ್ಟು ಬರುತ್ತೆ. ಮತ್ತೆ ಯಥಾ ಸ್ಥಿತಿ ಅವಳ ಅಮ್ಮನ ಬಳಿಗೆ ದೂರು. ಅವರಿಂದ ಮತ್ತೆ ಸಹಸ್ರ ನಾಮ ಪಾರಾಯಣ.

ನನಗೋ ಅದನ್ನು ಅವರಿಂದ ಕೇಳೋದಿಕ್ಕೂ ಒಂದು ಖುಷಿಯಿರುತ್ತೆ. ಅವರೂ ಅದನ್ನು ಸಖತ್ enjoy ಮಾಡ್ತಾರೆ. ಯಾಕೆಂದ್ರೆ ಈಗೀಗ ಅವರಿಗೆ ಗೊತ್ತಾಗಿದೆ ಎಲ್ಲರನ್ನು ಬದಲಿಸಿದಂತೆ ನನ್ನನ್ನು ಮಾತಿನಿಂದ ಬಗ್ಗಿಸೋಕೆ ಸಾಧ್ಯವಿಲ್ಲ ಅಂತ. ಅದಕ್ಕೆ ಈಗ ಅವರೇ ಬದಲಾಗಿದ್ದಾರೆ. ನಾನು ಹೇಳಿದಂತೆಯೇ ಕೇಳ್ತಾರೆ. ಕಸಿನ್ ಕಾಟ ಜಾಸ್ತಿಯಾಗಿದೆ. ಮೊನ್ನೆ ಇದ್ದಕ್ಕಿದ್ದಂತೆ ಅತ್ತಿಗೆ ಬರಲಿ ಅವಳಲ್ಲಿ ಹೇಳುತ್ತೇನೆ ಎಂಬ ವರಸೆಯ ಮಾತು ಆರಂಭಿಸಿದ್ದಾಳೆ. ಅತ್ತಿಗೆಯಲ್ಲಿ ಹೇಳುವುದನ್ನು ಅತ್ತಿಗೆಯಲ್ಲಿ ನೀನು ಹೇಳಲೇ ಬೇಕು ಎಂದು ಅವಳಲ್ಲಿ ಹೇಳಿದ್ದೇನೆ. ಅವಳೂ ಅದನ್ನು ಅರಿತಿದ್ದಾಳೆ. ಅದಕ್ಕೆ ಈಗ ಮೌನವಾಗಿದ್ದಾಳೆ. ಅವಳಿಗೆ ಅತ್ತಿಗೆ ಬರುತ್ತಾಳೆಂದು. ಅವಳದೂ 2009ರ ವೇಳೆಗೆ ಮದುವೆ ಇದೆ. ಸೋದರ ಸಂಬಂಧಿಯೇ ಮದುವೆಯಾಗ್ತಾ ಇದ್ದಾನೆ. ಅಷ್ಟರವರೆಗೆ ಜಗಳ ಮುಂದುವರಿಸ್ತಾ ಇರ್ತಾಳೆ. ಇರಲಿ ಅವಳಿಗೋಸ್ಕರ ಸ್ವಲ್ಪ ಕಾಟ ಕೊಡಲೆಂದು ತಯಾರಾಗುತ್ತಿದ್ದೇನೆ. ಅಷ್ಟಕ್ಕೂ ಅವಳನ್ನು ಒಂದು ಸಲ ಈಗ ಬದಲಾಯಿಸಬೇಕು ಎನಿಸಿದೆ. ಅವಳು ಬದಲಾದರೆ ಅವಳ ಬಗ್ಗೆ ಮತ್ತೆ ಬರೆದೇನು.
ಯಾಕೋ ಇಂಟರ್ನೆಟ್ ಮುಂದೆ ಕೂತು ಕೆಲವು ಬ್ಲಾಗ್ ಗಳನ್ನು ಸುತ್ತಿದಾಗ ಅದರಲ್ಲಿ ಕೆಲವು ಇಷ್ಟವಾಯಿತು. ಕೆಲವು ಮನಸ್ಸಿಗೆ ತಟ್ಟಿತು. ಅದರ ಆಧಾರದಲ್ಲಿ ಇದನ್ನು ಬರೆದಿದ್ದೀನಿ. ಇದರಲ್ಲೂ ಕೆಲವು ಸತ್ಯಗಳಿವೆ. ಸುಮ್ಮನೆ ಒಪ್ಪಿಕೊಳ್ಳಿ.

No comments: