Monday, December 31, 2007

ಹಳೆ ಉಲ್ಲಾಸದೊಂದಿಗೆ ಹೊಸ ದಿನ

ಮತ್ತೆ ಬಂದಿದೆ ಹೊಸ ವಷದ ಸಂಭ್ರಮ. ಕಳೆಯಿತು 2007ರ 365 ದಿನ. ಮತ್ತೆ ಹೊಸ ವರುಷದ ಹೊಸ ಹಾದಿಯಲ್ಲಿ ನಾವಿದ್ದೇವೆ. ಈ ಸಂಭ್ರಮದಲ್ಲಿ ಕೆಲವರಿಗೆ ಕೆಲವು ನೆನಪುಗಳ ಸಿಹಿಯೂ ಇರುತ್ತೆ, ಕಹಿ ಜತೆಗೇನೇ ಇರುತ್ತೆ. ಸಿಹಿ ಕಹಿಗಳ ಸಂಬಂಧವೇ ಜೀವನ ಎನ್ನುವುದು ಮಾತು.
ಆ ನೆನಪಿನ ಬುಟ್ಟಿಗೆ ಮತ್ತೆ ಕೆಲವನ್ನು ಜೋಡಿಸಲು ಇಂದೊಂದು ಯತ್ನವಾಗುತ್ತದೆ ಎನ್ನುವುದು ದಿಟ. ನನ್ನ ಪಾಲಿಗೆ ಹೊಸವರುಷ ಎಲ್ಲಾ ದಿವಸದಂತೆ ಇನ್ನೊಂದು ದಿನ.
ಹಳೆಯ ದಿನದಂತೆ ಹೊಸ ದಿನದ ಕೆಲವು ಕ್ಷಣ ನಮಗೆ ಆನಂದ ನೀಡುವುದಿಲ್ಲ ಎನ್ನುವುದನ್ನು ನಿರಾಕರಿಸಲಾಗದು. ಆ ಒಂದು ದಿನಾನೇ ನಾನು ಬದಲಾಗ್ತೀನಿ ಎಂದು ಘೋಷಿಸಿದ ತಕ್ಷಣ ನಮಗೆ ಬದಲಾಗಲು ಸಾಧ್ಯವಿಲ್ಲ. And its highly impossible. ಯಾರದೋ ಕಾರುಣ್ಯಕ್ಕೆ ಒಳಗಾಗಲು ನಾವು ಬದಲಾಗಲು ಹೊಸ ವರುಷದ ಮೊದಲ ದಿನವೇ ಬೇಕೇ? I dont know. ಹೊಸ ವರುಷದ ಆರಂಭದಲ್ಲಿ ಕೆಲವರು ಬದಲಾಗುವ resolution ತೆಗೆದುಕೊಳ್ಳುತ್ತಾರೆ. ಆದರೆ ಜನವರಿ ತಿಂಗಳ ಕೊನೆಯ ವೇಳೆಗೆ ರದ್ದಿ ಕಾಗದದಂತೆ ಕಸದ ಬುಟ್ಟಿ ಸೇರಿರುತ್ತದೆ.
ಅಷ್ಟಕ್ಕೂ ಕಳೆದ ವರುಷ ಏನೇನಾಯಿತು ಎನ್ನುವುದನ್ನು ಚಿಂತೆ ಮಾಡುವುದೂ ಒಂದು ರೀತಿಯಲ್ಲಿ ಉತ್ತಮ ಸಂಪ್ರದಾಯವೇ ಹೌದು. ಬಾಲ್ಯದಿಂದ ತೊಡಗಿ ಇಂದಿನವರೆಗೆ ನಡೆದ ಹೊಸ ವರುಷದ ನವ ದಿನಗಳಲ್ಲಿ ನನಗೆ ನೆನಪಿಡಲು ಹಲವು ದಿನಗಳಿವೆ. ಆದರೆ ಆ ಸಂಭ್ರಮವನ್ನು ಇಲ್ಲಿ ಹಂಚಿಕೊಳ್ಳಲು ಹೊರಟರೆ ಅದನ್ನು ಬರೆಯುವುದಕ್ಕೆಂದೇ ಒಂದು ತಿಂಗಳು ಬೇಕಾಗಬಹುದು. ಆದ್ದರಿಂದ ಅದರ ಬಗ್ಗೆ ಚಿಂತೆ ಮಾಡುವುದಿಲ್ಲ, ನಿಮ್ಮ ತಲೆ ಕೆಡಿಸುವುದೂ ಇಲ್ಲ. ಏನೇ ಇರಲಿ ಹೊಸ ವರುಷ ಎಲ್ಲರಿಗೂ ಶುಭ ತರಲಿ. ಅದಕ್ಕೆ ಹೇಳಿದ್ದು ಕ್ಯಾಲೆಂಡರ್ ಬದಲಾಗಿದೆ, ಹೊಸ ಜನವರಿ ಬಂದಿದೆ. ಆದರೆ ನೋಡುವ ನಾವು ಬದಲಾಗುತ್ತೇವೋ ಇಲ್ವಾ. ನನ್ನ ಪಾಲಿಗಂತೂ ಏನೂ ಬದಲಾವಣೆಯ ಮುನ್ಸೂಚನೆಗಳು ಕಾಣಿಸುತ್ತಿಲ್ಲ.
ನಾವು ಕಳೆದ ವರುಷದ ನೆನಪಿನೊಂದಿಗೆ ಹೊಸ ಕನಸನ್ನು ಕಟ್ಟಿಕೊಂಡರೆ ಅದಕ್ಕಿಂತ ಮಿಗಿಲಾದುದು ಇನ್ಯಾವುದಿದೆ ಅಲ್ಲವೇ. ಬ್ಲಾಗಿನಲ್ಲಿ ನೀವು ಹಂಚಿಕೊಂಡ ವಿಷಯಗಳು, ನಿಮ್ಮ ಪ್ರೀತಿಯ ಸಲಹೆ ಈ ವರುಷವೂ ಮುಂದುವರಿಯಲಿ. 2008ರಲ್ಲಿ ನಿಮಗೆ ಬ್ಲಾಗ್ ಹೊಸ ರೀತಿಯ ಅಕ್ಷರ ಧಾರೆಯನ್ನು ನೀಡಲಿದೆ ಎನ್ನುವ ಭರವಸೆಯನ್ನು ಮಾತ್ರ ಈಗ ನಾನು ನಿಮಗೆ ನೀಡಬಲ್ಲೆ. ಇಷ್ಟವಾದೀತು ಎಂಬ ಭರವಸೆ ಇದೆ.

No comments: