ರಾಮಾ ರಾಮಾ...
ಅಮೃತಧಾರೆ ಚಿತ್ರ ನೋಡಿದ ನಂತರ ನನ್ನ ಸುಮಾರು ದಿನಗಳ ಕಾಲ ಕಾಡಿದ ಹಾಡಿನ ನವಿರಾದ ಸಾಲುಗಳಿವು. ನಿಜವಾಗಿಯೂ ಆ ಹಾಡು ಹಾಡುವ ವೇಳೆ ಕ್ಷಣ ಮನಸು ಕೆಲವು ಬಾರಿ ಚಿಂತನೆಗೆ ಹಚ್ಚುತ್ತಿತ್ತು. ಇಂದಿಗೂ ಆ ಹಾಡು ನನ್ನ ಪಾಲಿನ ಅದ್ಭುತ ಸಾಲುಗಳೇ...
ಕೆಲವು ಸುಮಧುರ ಹಾಡುಗಳೇ ಹಾಗೆ ಸುಮ್ಮನೆ ಹಾಗೆ ಕೇಳುತ್ತಾ ಕುಳಿತರೆ ಸಾಕು, ಕೆಲವೊಂದು ಭಾರಿ ತೀವ್ರ ಭಾವೋದ್ವೇಗಕ್ಕೊಳಗಾಗಿಸುತ್ತವೆ. ಹಾಡಿನ ಎಲ್ಲಾ ಸಾಲುಗಳನ್ನು ಕೇಳಬೇಕೆಂದಿಲ್ಲ. ಕೇವಲ ಎರಡೇ ಎರಡು ಸಾಲುಗಳು ಸಾಕು ಮನ ತಾಕಲು.
ಜೀವನಾನೂ ಕೆಲವು ವೇಳೆ ಅದೇ ಕೇಳಿದ ಹಾಡುಗಳ ಧಾಟಿಯಲ್ಲೇ ಸಾಗುತ್ತದೆ. ಎಲ್ಲೋ ಒಂದು ಕ್ಷಣ ನೋವು, ಅರೆ ಕ್ಷಣ ನಲಿವು. ಒಂದು ಕ್ಷಣ ಸುಪ್ತವಾಗಿದ್ದ ಭಾವನೆಗಳನ್ನು ಉದ್ದೀಪಿಸಿ ದೂರ ಸಾಗುತ್ತವೆ. ಮತ್ತೆ ಅದೇ ಹಾಡು ನೆನಪಾಗಲು ಸುಮಾರು ದಿನಗಳೇ ಬೇಕು. ಅದು ಮುಖೇಷ್ ಹಾಡಿದ ಹಿಂದಿಯ ಅಮರ ಪ್ರೇಮಿಗಳ ಬಗೆಗಿನ ನವಿರಾದ ಸಾಲುಗಳೇ ಇರಬಹುದು ಅಥವಾ ಕಿಶೋರ್ ಕುಮಾರ್ ಹಾಡಿದ ಸಾಲುಗಳೇ ಇರಬಹುದು.
ಒಂದೇ ಕ್ಷಣಕ್ಕೆ ಅವರ ದನಿಗೆ ನಾನೂ ದನಿಗೂಡಿಸುತ್ತೇನೆ. ಕೆಲವು ಹಾಡುಗಳ ಸಾಲುಗಳು ಹಾಗೇನೇ. ಸುಮ್ಮನೆ ಕೂತು ನೆನೆದರೆ ಸಾಕು ಒಂದಿಡೀ ದಿನ ಆ ಹಾಡುಗಳು ಬಾಯಲ್ಲಿ ಗುನುಗುಟ್ಟುತ್ತಾ ಇರುತ್ತವೆ. ನೀವು ಬೇಡವೆಂದರೂ ಹಾಡು ನಿಮ್ಮ ಮನಸ್ಸನ್ನು ಬಿಡುವುದಿಲ್ಲ. ಅದಕ್ಕೇ ಹೇಳಿದ್ದು 'ಹಾಡು ಹಳೆಯದಾದರೇನು, ಭಾವ ನವ ನವೀನ...' ನನ್ನ ಮನ ತಾಕಿದ ಹಾಡುಗಳ ಬಗ್ಗೆ ಮುಂದೆಂದಾರೂ ಬರೆದೇನು. ಅದಕ್ಕೂ ಮೊದಲು ಸುಮ್ಮನೆ ಯಾವುದಾದರೂ ಒಂದು ಹಾಡಿನ ಸುಮಧುರ ಸಾಲುಗಳನ್ನು ಮೆಲುಕು ಹಾಕಿ. ಹಾಡು ನಿಮ್ಮ ಬಿಟ್ಟು ಹೋಗದಿದ್ದರೆ ಅದಕ್ಕೆ ನನ್ನ ಕಾಡಬೇಡಿ.
1 comment:
ಕೂಸು ಕುಂಚಿಗೆ ತಿಂತ್ಯು, ಹಾಸಿಗೆ ನೆಲ ತಿಂತ್ಯು ಎಂಬುದು ಬಹುಶಃ ಎಲ್ಲರೂ ಕೇಳಿ ಬೆಳೆದ ಹಾಡು. ಅದನ್ನು ಬೇಂದ್ರೆಯವರು ತಮ್ಮ ಕವಿತೆಗೆ ಅಳವಡಿಸಿಕೊಂಡು ಹಾಗೆ ಬರೆಯುತ್ತ ಸಿನಿಮಾ ಸಂಗೀತ ತಿಂತ್ಯು ಅಂತ ಬರೆದಿದ್ದಾರೆ. ಬಹುಶಃ ಮೂಲತಃ ಸಿನಿಮಾದ್ದಲ್ಲದ ಸಂಗೀತ ಹೆಚ್ಚಾದಂತೆಲ್ಲ ಬರೀ ಚಿತ್ರಸಂಗೀತ ಕೇಳುವ ಜನ ಇನ್ನೂ ಹೆಚ್ಚು ಆನಂದಿಸುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
Post a Comment