Saturday, May 12, 2007

ಎಲ್ಲಿ ಮರೆಯಾಗಿ ಹೋದೆ?

ಓ ಇನಿಯೇ ಎಲ್ಲಿರುವೆ
ಎಲ್ಲಿ ಮರೆಯಾಗಿರುವೆ
ಬಾಳ ಸುಖದಲಿ
ಸಹಭಾಗಿಗಳಾಗಿ
ಸಂತಸದಿಂದಿರೋಣ

ಈ ಮಧ್ಯೆ ಎಲ್ಲಿ ಮರೆಯಾಗಿ ಹೋದೆ?


ಮನದ ಬಯಕೆಗಳಿಗೆ ಆಸರೆಯಾಗಿಂದಿರುವುದು
ನೋವಿನಲೂ ನಲಿವಾಗಿ
ಕಾಡಿದ ನಿನ್ನ ನೆನಪುಗಳು ಮಾತ್ರ
ಅದುವೇ ನನ್ನ ಅಕ್ಷಯ ಪಾತ್ರೆ
ಅದು ಎಂದಿಗೂ ಖಾಲಿಯಾಗಲ್ಲ
ಆದರೂ ಮನಸ್ಸು ಕೇಳುತಿದೆ

ಎಲ್ಲಿ ಮರೆಯಾಗಿ ಹೋದೆ?


ಹೋಗುವಾಗ ಕಾರಣವಾದರೂ
ನೀಡಿದರೆ ಸಮಾಧಾನ ಮನಕೆ
ಹೇಳದೆ ಕೇಳದೆ ಹೋದರೆ
ಜತೆಗೆ ಮನಸೂ ಕಾರಣ ಕೇಳಿದರೆ
ಉತ್ತರವಿಲ್ಲ ನನ್ನಲಿ


ಮತ್ತೆ ಬಂದು ನನ್ನ ಸೇರು
ಎಂದು ಬೇಡದು ಮನವು
ಆದರೆ ನಿನ್ನ ಬಗ್ಗ್ಗೆ ಕೇಳುವ
ಉಳಿದವರಲ್ಲಿ ಏನ ಹೇಳಲಿ ನಾನು
ಪ್ರಿಯೆ ಒಂದೇ ಸಾರಿ
ಬಂದು ಹೇಳಿ ಹೋಗು ಕಾರಣ
ಇಲ್ಲದಿದ್ದರೆ ಕೇಳುತ್ತಲೇ ಇರುವೆ
ಎಲ್ಲಿ ಮರೆಯಾಗಿ ಹೋದೆ?

1 comment:

ಚಿತ್ರಾಕರ್ಕೇರಾ, ದೋಳ್ಪಾಡಿ said...

ಹಲೋ,
ಏನು ಇನಿಯೆದು ಸಕತ್ ನೆನಪಾಗಿದೆಯೇ? ಬ್ಲಾಗ್ ಚೆನ್ನಾಗಿದೆ. ನನ್ ಬ್ಲಾಗಿದೆ ಸುಸ್ವಾಗತ............