ತಾಯಿ, ಅಮ್ಮ.
ಆಕೆ ಮಮತಾಮಯಿ, ವಾತ್ಸಲ್ಯಪೂರ್ಣೆ. ಆಕೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಬಾಲ್ಯ ಕಾಲದಿಂದ ತೊಡಗಿ ಇದುವರೆಗೆ ತನ್ನ ಕಂದನ ಒಳಿತಿಗಾಗಿಯೇ ಜೀವವನ್ನು ತೇಯುವಾಕೆ. ಕಂದ ಯಾವುದೇ ತಪ್ಪು ಮಾಡಿದರೂ ಅದನ್ನು ಕ್ಷಮಿಸುವ ಗುಣವಂತೆ. ತನ್ನ ಮಗುವಿಗೋಸ್ಕರ ಬಹಳಷ್ಟು ಕಷ್ಟಪಟ್ಟು ಎಲ್ಲ ನೋವನ್ನೂ ಅನುಭವಿಸಿ ಬೆಳೆಸುವ ಆಕೆಯನ್ನು ಕಂಡರೆ ನನ್ನಲ್ಲಿ ಯಾವುದೋ ಅದಮ್ಯ ಸಂತಸ. ನವ ಮಾಸ ಕಾಲ ತನ್ನ ಗರ್ಭದಲ್ಲಿ ಹೊತ್ತು ಪೋಷಣೆ ಮಾಡುತ್ತಾ, ಭುವಿಗೆ ಬಿದ್ದಂದಿನಿಂದ ಮಗುವನ್ನೇ ಧ್ಯಾನಿಸುತ್ತಾ, ಬಾಲ್ಯದಲ್ಲಿ ಹೆಜ್ಜೆಯ ಜತೆ ಹೆಜ್ಜೆ ಹಾಕುತ್ತಾ, ಬಾಲ್ಯದ ಮೊದಲ ಅಕ್ಷರಗಳನ್ನು ಕಲಿಸಿದ ಆಕೆಯನ್ನು ನಾವು ಮರೆಯಲು ಸಾಧ್ಯವೇ?
ತನ್ನ ಕಂದನಿಗೋಸ್ಕರ ತನ್ನ ಸರ್ವ ಸಂತಸಗಳನ್ನು ಬದಿಗೊತ್ತಿ ಸದಾ ತನ್ನ ಮಗುವಿನದೇ ಚಿಂತೆ ಮಾಡುವುದು ಪ್ರೀತಿಯ ಅಮ್ಮನಿಂದಲ್ಲದೆ ಬೇರೆ ಯಾರಿಂದ ಸಾಧ್ಯ?
ಜಾಗತೀಕರಣ, ವಾಣಿಜ್ಯೀಕರಣದ ನಡುವೆ ತಾಯಿಯ ಪ್ರೀತಿ ಒಂದಿನಿತೂ ಕಮ್ಮಿಯಾಗಿಲ್ಲ. ಆಕೆ ಅದೇ ಹಿಂದಿನದೇ ಅಮ್ಮ. ಆದರೆ ಮಗ ಅಥವಾ ಮಗಳು ಬದಲಾಗ್ತಾ ಇದ್ದಾರೆ. ತನ್ನ ಸರ್ವ ತ್ಯಾಗಗಳಿಂದ ಜೀವನವನ್ನು ಸುಂದರವಾಗಿಸಿದ, ಆಕೆಗಾಗಿ ಮೀಸಲಿಟ್ಟ ದಿನ ಮೊನ್ನೆ ಕಳೆದು ಹೋಯಿತು. ಈ ಸಂದರ್ಭ ಶುಭಾಶಯ ಸಂದೇಶವೊಂದು ಮೊಬೈಲ್ ನಲ್ಲಿ ಹರಿದಾಡುತ್ತಿತ್ತು. ಅದು ಹೀಗಿತ್ತು.
’ನೀನು ಮಾತನಾಡಲು ಕಲಿಯುವಾಗ ನೀನು ಹೇಳುತ್ತಿದ್ದ ಪ್ರತಿಯೊಂದು ಮಾತನ್ನೂ ಅಮ್ಮ ಅರ್ಥೈಸಿಕೊಳ್ಳುತ್ತಿದಳು, ಆದರ ಇಂದು ನಾವು ಎಲ್ಲಾ ತಿಳಿದೂ ಅಮ್ಮನಿಗೇನೂ ಗೊತ್ತಿಲ್ಲ ಎಂದೇ ವಾದಿಸುತ್ತೇವೆ.’
ಏನೇ ಇರಲಿ ಆ ಅಮ್ಮನಿಗೊಂದು ಪ್ರೀತಿಯ ನಮನ.
ಅಮ್ಮಾ ನಿನ್ನ ತೋಳಿನಲ್ಲಿ ಕಂದಾ ನಾನು...

2 comments:
andu matthu indu maguondu atthaga amma muddhisuthale..
adre,
mobile atthaga ellaru yeddu muddhisuthare..
Dear Chevar.....i have copied your description to my group...please permit me... am waiting for your replay
http://kannadigaraokkoota.ning.com/group/Amma
Post a Comment