ಕೆಲವೊಮ್ಮೆ ಕೆಲವೊಂದು ವಿಷಯಗಳ ಬಗ್ಗೆ ಯೋಚನೆ ಮಾಡುವಾಗ ದ್ವಂದ್ವ ನಮ್ಮ ಮನಸ್ಸನ್ನು ಕಾಡುತ್ತದೆ. ನಾನಿಂದು ಇರುವಲ್ಲಿಂದ ಕೇವಲ 10 ವರ್ಷ ಹಿಂದೆ ಕಣ್ಣು ಹಾಯಿಸಿದರೂ ಅಲ್ಲಿ ಎಲ್ಲವೂ ಅಚ್ಚರಿಯ ವಿಷಯಗಳೇ. ಎಷ್ಟೊಂದು ಬದಲಾವಣೆ? ಜೀವನಾನೇ ಹಾಗೇ. ಅಂದು ಭವಿಷ್ಯದ ಬಗ್ಗೆ ಕನಸಿಗಿಂತಲೂ ಹೆಚ್ಚು ಏನಾಗಬಹುದೋ ಎನ್ನುವ ಕಾತರವಿತ್ತು.
ಇಂದು ಮುಂದೇನಾಗುವುದೋ ಎಂಬ ಭಯವಿಲ್ಲ. ಜೀವನ ನಾನಂದು ಕೊಂಡದ್ದಕ್ಕಿಂತಲೂ ಸವಿಯಾಗಿ ಸಾಗ್ತಾ ಇದೆ. ಕಚೇರಿಯ ಕೆಲಸ ಹಾಯಾಗಿದೆ. ರೂಂ ಸೇರಿದರೆ ಪುಸ್ತಕಗಳ ರಾಶಿ. ಅವುಗಳನ್ನು ಓದಲೂ ಸಮಯ ಸಾಕಾಗ್ತಾ ಇಲ್ಲ.
ಈ ನಡುವೆ ಅನಿತಾ ದೇಸಾಯಿಯವರ ಪ್ರಶಸ್ತಿ ವಿಜೇತ ಪುಸ್ತಕ the inheritence of loss, ಗೀಲಾನಿ ಬರೆದ ತಿಹಾರ್ ಜೈಲಿನ ಅನುಭವ ಕಥನ ಮನಸ್ಸಿಗೆ ಮುದ ನೀಡ್ತಾ ಇದೆ. 'ಶಾಂತಾರಾಂ'ನತ್ತ ಕೈ ಚಾಚಿದ್ದೇನೆ. ಇವುಗಳ ಮಧ್ಯೆ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ನನ್ನ ಅಪ್ಪಿಕೊಂಡು ಬಿಟ್ಟಿದ್ದಾಳೆ. ಒಟ್ಟಿನಲ್ಲಿ ನನ್ನ ಪಾಲಿಗಿದು ಪುಸ್ತಕಗಳ ಸಮಯ. ಕೆಲಸ ಬಿಟ್ಟರೆ ಅವು ನನ್ನ ಕೈಗೆ ಸೇರಿರುತ್ತದೆ. ಓದು ನನ್ನ ಜೀವದ ಹವ್ಯಾಸ. ಯಾವುದೇ ಸಿಗಲಿ ಅದು ಪತ್ರಿಕೆ, ನಿಯತಕಾಲಿಕೆ ಎಂಬ ಭೇದವಿಲ್ಲದೆ ನನ್ನ ಮನ ಸೇರಿ ಮನೆ ಸೇರುತ್ತೆ. ಪುಸ್ತಕಗಳಿಗೆ ನನ್ನ ಕೈಯಲ್ಲಿ ಹಣ ನಿಲ್ಲಲ್ಲ. ಅವುಗಳು ನನ್ನ ಪಾಲಿನ ಮದಿರಾಲಯಗಳು. ಅದರಲ್ಲಿನ ಆನಂದ ನನಗೆ ಬೇರೆಲ್ಲೂ ಸಿಗೋದೂ ಇಲ್ಲ. ಪುಸ್ತಕದ ಬಗ್ಗೆ ಬರೆದರೆ ಅದೇ ಒಂದು ದೊಡ್ಡ ಕಾದಂಬರಿ. ಆದುದರಿಂದ ಸದ್ಯಕ್ಕೆ ಇಷ್ಟು ಸಾಕು. ಮತ್ತೆ ಭೇಟಿಯಾಗೋಣ...
Thursday, May 10, 2007
Subscribe to:
Post Comments (Atom)
4 comments:
ಪುಸ್ತಕದಲ್ಲಿ ನಶೆ ಇರುವದರ ಬಗ್ಗೆ ಬರೆದಿದ್ದು ಖುಶಿ ನೀಡಿತು.ನಾನು ಸಹ ಆ ಮದಿರಾಲಯದ ದಾಸನೆ !
ಅನಿತಾ ದೇಸಾಯಿಯವರು ಬರೆದಿದ್ದಾ the inheritence of loss? :)
- SHREE
ಅನಿತಾ ದೇಸಾಯಿಯವರಾ ಬರೆದಿದ್ದು the inheritence of loss? :)
ಹೌದು! ಪುಸ್ತಕಗಳನ್ನು ಓದಿದಾಗ ಸಿಗೋ ಖುಷಿ. ಇನ್ನೆಲ್ಲೂ ಸಿಗಲ್ಲ. ಪುಸ್ತಕಗಳನ್ನು ಓದಿಯೇ ಬದುಕನ್ನು ಕಟ್ಟಿಕೊಳ್ಳಬಹುದು ಏನಂತೀರಾ?
Post a Comment