Monday, November 03, 2008

ನೆನಪುಗಳ ಲೋಕದಿಂದ

ಕಳೆದ ಕೆಲವು ದಿನಗಳಿಂದ ಮನಸ್ಸು ತೀವ್ರ ಗೊಂದಲಕ್ಕೆ ಬಿದ್ದಿದೆ. ಯೋಚನೆ, ಚಿಂತೆ, ಹಳೆಯ ಕೆಲವು ಕನಸುಗಳು ಜತೆಗೆ ಜೀವನವೆಂಬ ಅದ್ಭುತ ಪ್ರೀತಿಯ ನಡುವೆ ನಿಂತಿರಬೇಕಾದರೆ ಮನಸ್ಸೆಂಬ ಮರ್ಕಟ ಎಲ್ಲೆಲ್ಲೋ ಕೊಂಡೊಯ್ಯುತ್ತವೆ.
ಅಷ್ಟಕ್ಕೂ ಜೀವನ ಅಂದ್ರೆ ಇಷ್ಟೇನಾ ಎಂಬ ಯೋಚನೆಯೂ ಬರುತ್ತೆ. ಕೇವಲ ಒಂದು ವಿನಾಕಾರಣದ ನೆವದಲ್ಲಿ ಇಷ್ಟೆಲ್ಲಾ ಘಟನೆಗಳು ಚರ್ಚೆಗಳು ನಡೆಯಬೇಕಾ ಎನ್ನುವ ಪ್ರಶ್ನೆಗಳು ಮನಸ್ಸನ್ನು ಕಾಡುತ್ತೆ.
ಈ ನಡುವೆ ಕಳೆದ ತಿಂಗಳಲ್ಲಿ ಲಭಿಸಿದ್ದ ಎರಡು ರಜೆಗಳಲ್ಲಿ ಚಿಕ್ಕಮಗಳೂರು ಹಾಗೂ ಚಾಮರಾಜನಗರದ ಕೆಲವು ಅದ್ಭುತ ತಾಣಗಳಿಗೆ ಹೋಗಿ ಬಂದೆವು. ಇವೆರಡರಲ್ಲಿ ನನಗೆ ಇಷ್ಟವಾಗಿದ್ದು ಚಿಕ್ಕಮಗಳೂರು ಯಾತ್ರೆ. ಅಲ್ಲಿನ ಮುಳ್ಳಯ್ಯನ ಗಿರಿ ಎಂಬ ಗಿರಿಯ ಮೇಲೆ ನಿಂತರೆ ಅದೊಂದು ಅದ್ಭುತ ತಾಣ. ಸುತ್ತಲೂ ಕವಿದ ಮಂಜು. ನಾವು ಮಂಜಿನ ನಡುವೆ ನಿಂತಿದ್ದರೆ ಕೆಳಗಡೆ ಚಲಿಸುವ ಮೋಡಗಳು. ಆ ಮಟ್ಟಿಗೆ ಅಂತಹ ಒಂದು ಅದ್ಭುತ ಸುಖವನ್ನು ನೀಡಿತ್ತು ಯಾತ್ರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಈ ಅದ್ಭುತ ತಾಣದಲ್ಲಿ ನಿಂತು ನನ್ನದೇ ಆದ ಲೋಕಕ್ಕೆ ಜಾರಿದ್ದೆ. ಹಿಂದೊಮ್ಮೆ ಇದೇ ರೀತಿ ಯಾವುದೋ ಒಂದು ಪ್ರವಾಸ ಹೋಗಿದ್ದಾಗಲೂ ಇದೇ ಅನುಭವವಾಗಿತ್ತು.
ಅಷ್ಟರ ಮಟ್ಟಿಗೆ ಪ್ರವಾಸದಲ್ಲಿ ನಾನು ಏಕಾಂತವನ್ನು ಸವಿಯುತ್ತೇನೆ. ಅದಕ್ಕೆ ಯಾವುದೇ ರೀತಿಯ ಕಾರಣವಿಲ್ಲ. ಬೆಂಗಳೂರೆಂಬ ಅಪ್ಪಟ ಕಾಂಕ್ರೀಟ್ ಕಾಡಿನಿಂದ ಹೊರಗೆ ಬಂದರೆ ಸಿಗುವ ಅದ್ಭುತ ಸುಖವಿದೆಯಲ್ಲಾ ಅದನ್ನು ಅನುಭವಿಸಿಯೇ ತೀರಬೇಕು. ಕಳೆದ ಹಲವಾರು ತಿಂಗಳಲ್ಲಿ ಇಂತಹ ಒಂದು ಏಕಾಂತ ಬೇಕಿತ್ತು. ಅದು ಸಿಕ್ಕಿತ್ತು. ಆಪರೇಷನ್ ಎಂಬ ಕಾರಣಕ್ಕೆ ಸುಮ್ಮನೆ ಮನೆಯಲ್ಲಿದ್ದಾಗಲೂ ಇಂತಹ ಒಂದು ಅದ್ಭುತ ಸುಖ ಸಿಕ್ಕಿತ್ತು.
ಉದ್ಯೋಗ ಎಂಬ ದೃಷ್ಟಿಯಿಂದ ಬೆಂಗಳೂರು ಇಷ್ಟವಾಗುತ್ತದೆಯೇ ಹೊರತು ಖಾಸಗಿಯಾಗಿ ಯಾವುದೇ ಕಾರಣಗಳೂ ಇಲ್ಲ. ಈ ಬೆಂಗಳೂರೆಂಬ ಬೆಂಗಳೂರಿನಲ್ಲಿ ಏನಿದೆ ಎಂದು ಕೇಳಿದರೆ ಕೆಲವರಿಗೆ ಅದು ಅಪಥ್ಯವಾದೀತೆಂಬುದು ಖಚಿತ. ಆದರೂ ಸತ್ಯ ಯಾವತ್ತೂ ಸತ್ಯವೇ ಅಲ್ಲವೇ.
ಸದ್ಯ ರಾಜ್ಯೋತ್ಸವ ಮುಗಿದಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಇನ್ನೇನು ನಡೆಯಲಿದೆ. ಬಾರಕ್ ಒಬಾಮಾ ಎಂಬಾ ಕೆನ್ಯಾ ಮೂಲದ ಮುಸ್ಲಿಂ ಪರಿವರ್ತಿತ ಕ್ರಿಶ್ಚಿಯನ್ ಹುಡುಗ ತಾನು ಕಟ್ಟಿಕೊಂಡ ಕನಸಿನೊಂದಿಗೆ ವಿ ನೀಡ್ ಚೇಂಜ್ ಎಂಬ ಘೋಷಣಾ ವಾಕ್ಯದೊಂದಿಗೆ ವಿಜಯದೆಡೆಗೆ ಮುನ್ನುಗ್ಗುತ್ತಿದ್ದಾನೆ.
ಜಾನ್ ಮೆಕೇನ್‌ಗಿಂತಲೂ ಬಾರಕ್ ಒಬಾಮಾ ಬಹಳ ಇಷ್ಟವಾಗುತ್ತಾನೆ. ಆತ ನಡೆದು ಬಂದ ಕಠಿಣ ಹಾದಿ, ಸವೆಸಿದ ದಾರಿ, ಚುನಾವಣಾ ಪ್ರಚಾರದ ವೇಳೆ ತನ್ನ ಮೂಲದ ಬಗ್ಗೆ ವಿರೋಧ ಪಕ್ಷದವರು ನಡೆಸಿದ ಪ್ರಚಾರಕ್ಕೆ ಸಮರ್ಥ ಉತ್ತರ ನೀಡುತ್ತಾ ಆತ ಇದುವರೆಗೆ ಸಹಿಸಿದ ಹಾದಿಯಿದೆಯಲ್ಲಾ ಅದಕ್ಕೆ ಆತ ಅಭಿನಂದನಾರ್ಹ. ಅವಮಾನವೆಂಬುದು ಆತನನ್ನು ಕಾಡಿ ಬೆಳೆಸಿದ ಪರಿ, ಸತತ ಬೆನ್ನಿಗಂಟಿಕೊಂಡ ವಿರೋಧ. ಇವುಗಳನ್ನೆಲ್ಲಾ ಎದುರಿಸಿ ಮುನ್ನಡೆದ ಆತನ ತುಂಬಾ ಇಷ್ಟವಾದ ಚೇಂಜ್ ಎಂಬ ಶಬ್ದಕ್ಕೆ ಹ್ಯಾಟ್ಸಾಫ್.

6 comments:

KRISHNA said...

ಹೌದು... ಮುಳ್ಳಯ್ಯನ ಗಿರಿ ರೀತಿಯಲ್ಲೇ ಬೆಳ್ತಂಗಡಿಯ ಗಡಾಯಿಕಲ್ಲು, ಬೆಳಗಾವಿ ಕ್ಯಾಸಲ್ ರಾಕ್ ಪಕ್ಕದ ದೂದ್‌ಸಾಗರ್‍, ಕುಮಾರಪರ್ವತ, ಅಷ್ಟೇ ಯಾಕೆ, ನಮ್ಮ ಸೋಮೇಶ್ವರ ಬೀಚ್‌ನಲ್ಲೂ ಏನೋ ಏಕಾಂತ ಸಿಗುತ್ತದೆ, ಅದನ್ನು ಹುಡುಕುವವರಿಗೆ ಮಾತ್ರ... ಆದರೆ ಮೊಬೈಲು, ಮೆಸೇಜ್ ಗುಂಗು ಇರಬಾರದೂ. ಆದ್ರೂ...ಎಲ್ಲೇ ಹೋದ್ರೂ ಚಿಂತೆ ಹೊತ್ತ ತಲೆ ಮಾತ್ರ ಅದೇ ಅಲ್ವ ಗುರುವೇ...?!

Anonymous said...

good one. keep it up...
-kumar

ಚಿತ್ರಾ ಸಂತೋಷ್ said...

ಎನ್ನ ಶರಧಿಗ್ ಶುಭಾಶಯ ಪಂಡಿನೆಕ್ ಮಸ್ತ್ ಕೃತಜ್ಞತೆಳು...ಈ ಬರಹ ಎಡ್ಡೆ ಉಂಡು ಆವೆ..ಮಸ್ತ್ ಬರೆಲೆ..
-ಚಿತ್ರಾ

Anonymous said...

chennagide guruve...

Lakshmikanth
Mandya

jomon varghese said...

ಚೆಂದದ ಬರಹ..

ಚಿತ್ರಾ ಸಂತೋಷ್ said...

ಈರೆನ ಫುಲ್ ಪುದರ್ ಪನ್ಲೆ..ಮಹೇಶ್ ಚೇವಾರಾ? ...
-ಚಿತ್ರಾ