ಮತ್ತೆ ಯಥಾ ಪ್ರಕಾರ ನಿಮ್ಮ ಮುಂದೆ ಬಂದಿದ್ದೇನೆ. ಒಂದರ್ಥದಲ್ಲಿ ಬರವಣಿಗೆ ನಿಂತು ಹೋಗಿದೆ. ಕಾರಣವೇನು ಎಂದು ಯೋಚಿಸಿದರೂ ತಲೆಗೆ ಹೊಳೆಯುತ್ತಿಲ್ಲ. ಇದ್ಯಾವ ಕಾರಣಕ್ಕೆ ಹೀಗಾಗುತ್ತಿದೆ ಗೊತ್ತಾಗುತ್ತಿಲ್ಲ. ಹಿಂದೊಂದು ಕಾಲವಿತ್ತು. ಅಲ್ಲಿ ನಾನು ಬರೆಯಲು ಕುಳಿತರೆ ಒಂದು ಸಣ್ಣನೆಯ ಬರಹ ತಣ್ಣನೆ ಹೊರ ಬರುತ್ತಿತ್ತು. ಅದಕ್ಕೊಂದಷ್ಟು ಮಂದಿ ಕೆಲವರು ಓದುಗರು. ತಿದ್ದಿ ತೀಡಿದವರು ಹಲವರು. ಆದ್ರೆ ಈಗ?
ಅವ್ಯಾವುದೂ ಇಲ್ಲ. ಹೆಚ್ಚೇಕೆ ಬರೆಯಲು ವಿಷಯಗಳೇ ಸಿಗುತ್ತಿಲ್ಲ. ಬರೆಯಲು ಕಂಪ್ಯೂಟರ್ ಮುಂದೆ ಕುಳಿತರೆ ಅನಾಥ ಭಾವ. ಇದೆ ರೀತಿ ಇನ್ನೆಷ್ಟು ದಿನ? ಇದೇ ರೀತಿ ಭಾವ ರಹಿತವಾಗಿ ಎಷ್ಟು ಕಾಲ? ಒಂದೂ ಗೊತ್ತಾಗುತ್ತಿಲ್ಲ. ಆದರೆ ಇದೇ ರೀತಿ ಸುಮಾರು ದಿನ ಇರಬಾರದು ಎಂದು ಗಟ್ಟಿ ಮನಸು ಮಾಡಿದ್ದೇನೆ. ಇಲ್ಲದಿದ್ದರೆ ಇಷ್ಟು ವರ್ಷಗಳಲ್ಲಿ ಪ್ರೇಮಿಗಳ ದಿನ ಎರಡಕ್ಷರ ಬರೆಯದಿದ್ದರೆ ಮನಸು ಕೇಳುತ್ತಿರಲಿಲ್ಲ. ಆದ್ರೆ ಈಗ ಯಾವುದೂ ಇಲ್ಲ. ಯುಗಾದಿಗೆ ಬರೆಯೋಣವೆಂದು ಹೊರಟೆ. ಆದರೂ ಬರೆಯಲಾಗಲಿಲ್ಲ.
ಇಂತಹ ಒಂದು ಭಾವ ಕೊನೆಯಾಗಬೇಕು. ಬರವಣಿಗೆ ಸುಲಲಿತವಾಗಿ ಹೊರ ಹೊಮ್ಮಬೇಕು ಎಂದು ಗಟ್ಟಿ ಮನಸು ಮಾಡಿದ್ದೇನೆ. ಮುಂದಿನದು ನಿರಂತರ ಬರವಣಿಗೆ. ಅದು ಮನದಲ್ಲಿ ಅಕ್ಷರಗಳು ಸುಂದರ ರೂಪವಾಗಿ ಪರಿವರ್ತನೆ ಪಡೆಯಬೇಕು ಎಂಬ ಹುಮ್ಮಸ್ಸಿನೊಂದಿಗೆ ಬರೆಯಲು ಕೂರಬೇಕು. ಮುಂದೊಂದು ದಿನ ನಾನು ನಿತ್ಯ ಬರೆಯುವ ಕನಸುಗಳನ್ನು ಸಾಕ್ಷಾತ್ಕಾರ ಮಾಡಬಹುದು ಎನ್ನುವ ನಂಬಿಕೆಯೊಂದಿಗೆ ಎಲ್ಲೆಲ್ಲೋ ಮನದ ಆಂತರ್ಯದಿ ಚದುರಿದ ಅಕ್ಷರಗಳನ್ನು ನಿಮ್ಮ ಮುಂದೆ ಇರಿಸಿದ ತೃಪ್ತಿ ನನ್ನದು. ಮುಂದೆ ಬರೆಯದೇ ಇರಲು ಕಾರಣಗಳೇ ಇಲ್ಲ. ಸದ್ಯಕ್ಕೊಂದು ವಿರಾಮ ಹಾಕಿ ವಾಪಸ್ ಬರುತ್ತೇನೆ.
Friday, March 12, 2010
Subscribe to:
Post Comments (Atom)
4 comments:
ವಿರಾಮ ಸಾಕು...ವಾಪಸ್ ಬಂದು ಬರೆಯೋಕೆ ಶುರುಮಾಡಿ
&ಚಿತ್ರಾ
good
nice
nice
Post a Comment