ಸದ್ಯ ನನ್ನ ಗೆಳತಿ @ 25. ಜೀವನದಲ್ಲಿ ಕೆಲ ಸಾಧನೆ ಮಾಡಬೇಕು ಎಂದು ಹೊರಟವನಿಗೆ ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಗೆಳತಿ ಅವಳು. ಅವಳ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ. ಗೆಳೆಯಾ ಜೀವನದಲ್ಲಿ ಕೋಪ ಬೇಡ, ಸಹನೆ ನಿನ್ನ ಮಂತ್ರವಾಗಲಿ ಎಂದು ಶತ ಒರಟನನ್ನು ತಿದ್ದಿ ಜೀವನದಲ್ಲಿ ಸಾಧನೆ ಮಾಡು ಎಂದು ಸದಾ ಬೆನ್ನಿಗೆ ಬಿದ್ದವಳು ನೀನು.
ದ್ವೇಷವೆಂಬ ಕ್ಷಣದ ಕೋಪ ಯಾವ ಅನಾಹುತಗಳಿಗೆ ಕಾರಣವಾಗುತ್ತದೆ ಎಂದು ಎಳೆಎಳೆಯಾಗಿ ಬಿಚ್ಚಿಟ್ಟವಳು ನೀನು. ನೀನು ಈ ರೀತಿ ವರ್ತಿಸಿದರೆ ಸರಿ ಇರಲ್ಲ, ನೀನೂ ಹೀಗೇ ಇರಬೇಕು ಎಂದು ಬಾಳ ಹಾದಿಯ ದಾರಿಯನ್ನು ತೋರಿಸಿದವಳು ನೀನು. ಕೋಪಿಸಿಕೊಂಡರೂ ಆ ಕ್ಷಣಕ್ಕೆ ಮಾತ್ರ ಕೋಪವಿರಲಿ ಎಂದು ತಪ್ಪು ಹಾದಿಯಲ್ಲಿ ನಡೆದಾಗ, ನಾನು ಮಾಡುತ್ತಿರುವುದನ್ನು ಧಿಕ್ಕರಿಸಿ ಗೆಳೆಯಾ ಬಾ ಕುಳಿತುಕೋ ಇದೆಲ್ಲಾ ಬೇಡ ಎಂದು ತಿಳಿಹೇಳಿದವಳು ನೀನು.
ಗೆಳೆಯಾ, ಮುಂದೊಂದು ದಿನ ಯಾವುದೋ ಕಾಲಘಟ್ಟದಲ್ಲಿ ಈ ಎಲ್ಲಾ ಮಾತುಗಳು ನಿನ್ನ ಪಾಲಿಗೆ ತುಂಬಾ ಸಹಕಾರಿಯಾಗುತ್ತದೆ ಎಂದು ಹೇಳಿ ಅಂದು ಪೀಡಿಸುತ್ತಿದ್ದವಳು ನೀನು. ಅಂದು ಹೇಳಿದ ಪಾಠ, ಕೇಳಿಸಿಕೊಂಡ ಹಿತವಚನ, ಜತೆಗೊಂದು ಅದೃಷ್ಟರೇಖೆ. ಇದೆಲ್ಲಕ್ಕಿಂತ ಹೆಚ್ಚಾಗಿ ನನಗೊಂದು ಅದ್ಭುತ ಗೆಳತಿಯಾಗಿ ಲಭಿಸಿದ ನೀನು.
ಇಂದು ನಿನಗೆ ೨೫ ರ ಸಂಭ್ರಮ. ನಿನ್ನ ಗೆಳತಿಯಾಗಿ ಪಡೆದ ನನಗೆ ಸುಂದರ ಘಳಿಗೆ. ಕಳೆದ ಹಲವು ವರ್ಷಗಳಿಂದ ಈ ಸಂಭ್ರಮ ಜತೆಗಿದೆ. ಇದು ಎಂದೆಂದಿಗೂ ಇರಲಿ, ಮುಂದಿನ ಸಂಭ್ರಮಕ್ಕೆ ನಾಂದಿಯಾಗಲಿ.
ನಿನ್ನ ಗೆಳತಿಯಾಗಿ ನೀಡಿದ ನಿನ್ನ ಅಪ್ಪ ಅಮ್ಮನಿಗೊಂದು ಥ್ಯಾಂಕ್ಸ್ ಹೇಳುತ್ತಾ, ಸದಾಕಾಲ ಸಂತಸ ನಿನ್ನ ಜತೆಗೆ ಇರಲಿ ಎಂದು ಹಾರೈಸುತ್ತಾ,
ನಿನ್ನ ಗೆಳತಿಯಾಗಿ ನೀಡಿದ ನಿನ್ನ ಅಪ್ಪ ಅಮ್ಮನಿಗೊಂದು ಥ್ಯಾಂಕ್ಸ್ ಹೇಳುತ್ತಾ, ಸದಾಕಾಲ ಸಂತಸ ನಿನ್ನ ಜತೆಗೆ ಇರಲಿ ಎಂದು ಹಾರೈಸುತ್ತಾ,
ನಿನಗೆ ಜನುಮದಿನದ ಶುಭಾಶಯ
5 comments:
ಎನ್ನಲಾ ಮೋಕೆದ ಶುಭಾಶಯ ಪನ್ಲೆ..ಸರ್..
-ಚಿತ್ರಾ
Very sweet. Thank you.
ಆರದಿರಲಿ ಬೆಳಕು...
deepa sada belaguttirali
best wish and best of luck
ಒಂದು ಕಾರ್ಡ್, ಒಂದು ಹೂವು, ಒಂದು ಮುತ್ತು, ಒಂದು ಉಡುಗೊರೆ, ಒಂದು ಆಲಿಂಗನ, ಒಂದು ಎಸ್ ಎಂ ಎಸ್, ಒಂದು ಪೋನ್ ಕಾಲ್, ಇವೆಲ್ಲಕ್ಕಿಂತ ಹೆಚ್ಚಾಗಿ ಏಕಾಂತದಲ್ಲಿ ಅವಳಿಗೆ ಇಷ್ಟೊಂದು ಪ್ರೀತಿ, ಸ್ನೇಹ ವನ್ನು ನಿನ್ನ ಹೃದಯದಲ್ಲಿ ತುಂಬಿದ ಭಾವನೆಗಳನ್ನು ಮಾತುಗಳಲ್ಲಿ, ಶಬ್ದಗಳಲ್ಲಿ ತುಂಬಿ ಬ್ಲಾಗಿನಲ್ಲಿ ಹಂಚಿರುವಿಯಲ್ಲಾ. ನಿನ್ನಂತಹ ಸ್ನೇಹಿತನನ್ನು ಪಡೆದ ಆಕೆಯೂ ಧನ್ಯೆ. ಶುಭವಾಗಲಿ. ಬಾಳಿನ ಬೆಳಕಾಗು.
ಒಲವಿನಿಂದ
ಬಾನಾಡಿ
Post a Comment