ಬಾ ಮಳೆಯೇ ಬಾ... ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ
ಬಿಡದೇ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ ಹಿಂತಿರುಗಿ ಹೋಗದಂತೆ ಬಿಡದೇ ಬಿರುಸಾಗಿ ಸುರಿ
ಯಾಕೋ ಮೊನ್ನೆಯಿಂದ ಬರುತ್ತಿದೆ ಅಕಾಲಿಕ ಮಳೆ. ಜತೆಗೆ ಮೇಲಿನ ಹಾಡಿನ ಸಾಲು ಕೇಳುತ್ತಿದ್ದರೆ ಮನವೆಲ್ಲಾ ಚೇತೋಹಾರಿ, ವಿಹಾರಿ. ಹಾಡಿನ ಕೊನೆಯವರೆಗಿನ ಸಾಹಿತ್ಯವೂ ಇಷ್ಟವಾಗಿದೆ. ಪ್ರತಿ ಸಾಲುಗಳ ಕಂಠಪಾಠಕ್ಕೆ ಪ್ರಯತ್ನಿಸುತ್ತಾ ಇದ್ದೀನಿ. ಹಾಡು ಯಾಕೋ ಸದಾ ನಾಲಿಗೆ ತುದಿಯಲ್ಲಿ ತೊಯ್ದಾಡುತ್ತಾ ಇದೆ. ಇದುವರೆಗೆ ಯಾವುದೇ ಹಾಡು ಇಂತಹ ಮೋಹಕ ಮಾಯೆಯನ್ನು ಮಾಡಿದ್ದಿಲ್ಲ. ಜತೆಗೆ ಈ ರೀತಿಯ ಅಕಾಲಿಕ ಮಳೆಯ ಮಾರ್ಚ್ ತಿಂಗಳಲ್ಲಿ ಇದುವರೆಗೆ ನಾ ನೋಡಿದ್ದಿಲ್ಲ. ಬಂದರೂ ಒಂದು ಅಥವಾ ಎರಡು ದಿನಗಳ ಬಳಿಕ ಸುಡು ಬಿಸಿಲು. ಆದರೆ ಈ ಬಾರಿ ಹಾಗಾಗಿಲ್ಲ, ಮಳೆ ದಿನೇ ದಿನೇ ಏರಿಕೆಯಾಗುತ್ತಿದೆ.
ಹಾಡು ಪೂರ್ತಿ ಭಾರಿ ಇಷ್ಟವಾಗಿದೆ. ಯಾಕೋ ಗೊತ್ತಿಲ್ಲ. ಕೆಲವು ಹಾಡುಗಳು ಹಾಗೇನೆ. ಅದರ ಕೆಲ ಸಾಲುಗಳು ನವಿರಾಗಿ ಇಂಪಾಗಿರುತ್ತವೆ. ಅದರಲ್ಲಿ ಕೆಲವನ್ನು ಹೆಸರಿಸಿದರೆ ಅಮೃತಧಾರೆಯ ಈ ಅಮೃತಧಾರೆ. ಇದನ್ನು ಹಾಡಿ ನಾನು ಪೆಟ್ಟು ತಿಂದಿದ್ದೆಷ್ಟೋ. ಜತೆಗೆ ಕೆಂಗಣ್ಣಿಗೂ ಗುರಿಯಾದೆ. ನಂತರ ತುಂತುರು ಅಲ್ಲಿ ನೀರ ಹಾಡು ಇಷ್ಟವಾಯಿತು. ಜತೆಗೆ ಇನ್ನೂ ಕೆಲವು ಹಾಡುಗಳ ಸಾಲು ಇದೆ.
ಅವೆಲ್ಲಾ ಇರಲಿ, ಭಾವನೆಗಳ ಜತೆ ಅಡ್ಡಾಡುವವರಿಗೆ ಇದು ಭರ್ಜರಿ ಸಮಯ. ಮಳೆಯೂ ಕೆಲವು ಬಾರಿ ಇಷ್ಟವಾಗುತ್ತೆ. ಒಂದೊಂದು ತುಂತುರು ಹನಿ ಬಿದ್ದಾಗಲೂ ಮೈಯೆಲ್ಲಾ ಪುಳಕ. ಅದಕ್ಕೆ ಜೂನ್‌ನಲ್ಲಿ ಬೀಳುವ ಮಳೆಯೇ ಆಗಬೇಕಾಗಿಲ್ಲ. ಯಾವ ಮಳೆಯಾದರೇನು. ಒಟ್ಟಾರೆ ಅದನ್ನು ಅನುಭವಿಸುವ ರೀತಿ ತಿಳಿದಿರಬೇಕು ಅಷ್ಟೇ. ಯಾಕೋ ಇತ್ತೀಚೆಗೆ ಬರೆಯಬೇಕು ಎನ್ನುವ ಹಠ ಚಟವಾಗಿ ಬಿಟ್ಟಿದೆ. ಇಲ್ಲಾ ಎಂದರೆ ಒಂದೇ ತಿಂಗಳಲ್ಲಿ ಇಷ್ಟೆಲ್ಲಾ ಬರೆದದ್ದು ನೆನಪಿಲ್ಲ.
ಮೊದಲು ಓದಿನಲ್ಲಿ ಮಾತ್ರ ಇದ್ದ ಸಂಭ್ರಮ ಈಗ ಬರವಣಿಗೆಯಲ್ಲಿ ಲಭಿಸಲಾರಂಭಿಸಿದೆ. ಅದಕ್ಕೇ ಬರವಣಿಗೆ ಆರಂಭಿಸಿದ್ದೇನೆ. ಎಲ್ಲಿಯವರೆಗೆ ನಿರಂತರತೆಯಿಂದ ಬರೆಯುತ್ತೇನೆ ಎಂದು ಗೊತ್ತಿಲ್ಲ. ಕೆಲವೊಂದು ಬಾರಿ ಕೈ ಬರೆಯುವುದಕ್ಕೂ ಅಡ್ಡಿಯಾಗುತ್ತಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಮೇ ಆರಂಭದ ವೇಳೆಗೆ ಕೈಗೆ ಇರುವ ಅಡ್ಡಿ ದೂರವಾಗುತ್ತದೆ. ಅದು ಏನು ಎತ್ತ ಎನ್ನುವುದು ಸದ್ಯದ ಮಟ್ಟಿಗೆ ಸಸ್ಪೆನ್ಸ್. ಹತ್ತಿರದಿಂದ ಬಲ್ಲ ಕೆಲ ಹಿರಿ ಜೀವಗಳಿಗೆ ಇದು ಬೇಗನೆ ಅರ್ಥವಾಗುತ್ತೆ.
ಬರವಣಿಗೆಯ ಖುಷಿಗೆ ಬಂದರೆ ನಾನು ಸಂಭ್ರಮದ ತುತ್ತತುದಿಯಲ್ಲಿದ್ದೇನೆ. ಮೊನ್ನೆ ಮಹಿಳಾ ದಿನಾಚರಣೆಗೆ ಬರೆದ ಬ್ಲಾಗ್ ಪೋಸ್ಟ್‌ಗೆ ಅಕ್ಕ (?) ಪ್ರಶಂಸೆಯನ್ನೇ ಸುರಿಸಿದ್ದಾಳೆ. ಓದಿದ ತಕ್ಷಣ ಅವಳು ಹೇಳಿದ್ದು ಒಂದೇ ಮಾತು. ಈ ರೀತಿ ಬರೆಯಬೇಕು ಎಂದು. ಸುಮ್ಮನೇ ಮಹಿಳಾ ದಿನ ಎಂದು ವೇದಿಕೆ ಏರಿ ಮಾತನಾಡುವುದರಿಂದ ಏನು ಪ್ರಯೋಜನ. ಮನಸ್ಸಿಗೆ ಅನ್ನಿಸಿದ್ದನ್ನು ಈ ರೀತಿ ಬರೆದಿದ್ದೀಯಲ್ಲಾ ಓದುವಾಗ ಖುಷಿಯಾಗುತ್ತಿದೆ ಅಂತ. ಅದಕ್ಕಿಂತ ಹೆಚ್ಚು ಇನ್ನೇನು ಬೇಕು. ಅವಳ ತೃಪ್ತಿಕರ ಮಾತೇ ಎನಗೆ ಸಾಕು. ಇನ್ನೊಬ್ಬಾಕೆಗೆ ಇನ್ನೂ ಎಚ್ಚರವಾಗಿಲ್ಲ. ಅವಳು ಯಾವತ್ತೂ ಹಾಗೇನೇ....!!! ಅದು ಅವಳ ತಪ್ಪಲ್ಲ ಬಿಡಿ.
ಕಳೆದ ೮ ತಿಂಗಳಿನಿಂದ ಮನಸ್ಸು ಬರವಣಿಗೆಗೆ ಸ್ಪಂದಿಸುತ್ತಿರಲಿಲ್ಲ. ಈಗ ಅದೂ ಸರಿಯಾಗಿದೆ. ಇನ್ನು ಬರವಣಿಗೆ ಓಘ ಹರಿಯುತ್ತಾ ಇರುತ್ತೆ. ಇದೇ ರೀತಿ ನಿತ್ಯ ನಿರಂತರ.

1 comment:
ನೀನೊಳ್ಳೆ ಕವಿಯೂ ಹೌದು ಮಾರಾಯ.
Post a Comment