Sunday, June 17, 2007

ಮಳೆಯ ನಿರೀಕ್ಷೆಯಲ್ಲಿ

ನಿನ್ನೆ ಮನೆಗೆ ಫೋನ್ ಮಾಡಿದ್ದೆ. ಮಾತು ಆರಂಭಕ್ಕೆ ಮೊದಲೇ ಮುಂಗಾರು ಮಳೆಯ ಆಗಮನವನ್ನು ಸೂಚಿಸಿದ್ದರು. ಆದರೆ ಬೆಂಗಳೂರಿನಲ್ಲಿ ನಾವು ಪ್ರೇಮಿಯನ್ನು ಕಾದ ಹಾಗೆ ಮಳೆಗಾಗಿ ನಿರೀಕ್ಷೆಯಿಟ್ಟು ಕಾಯಬೇಕು. ಯಾಕೆ ಹೀಗೆ?

ಸಂಜೆಯಾಗುತ್ತಿದ್ದಂತೆ ಮೋಡಗಳು ದಟ್ಟವಾಗುತ್ತದೆ. ಆದರೆ ನಾವು ಪ್ರೀತಿಯಿಂದ ಕಾಯುತ್ತಿದ್ದ ಮಳೆ ಬರೋದೆ ಇಲ್ಲ. ಮೋಡಗಳು ಆವರಿಸುತ್ತಿದ್ದಂತೆ ಮನಸು ಯಾಕೋ ಯಾವುದಕ್ಕೋ ಹಂಬಲಿಸುತ್ತದೆ. ಆದರೂ ಅದೊಂದು ಅವ್ಯಕ್ತ ಬಯಕೆ. ಏನು ಎಂದು ಅರಿವಾಗುವ ಮುನ್ನವೇ ಆ ಹಂಬಲ ಮಾಯವಾಗ್ತದೆ. ಇಂದೂ ಅದೇ ತರ ಮಳೆಯ ಆಗಮನದ ಎಲ್ಲಾ ಲಕ್ಷಣಗಳಿದ್ದವು. ಆದರೂ ಮಳೆಯಾಗಲೇ ಇಲ್ಲ. ಯಾಕೆ ಮಳೆ ಈ ರೀತಿ ಕಣ್ಣಾ ಮುಚ್ಚಾಲೆ ಆಡ್ತಾ ಇದೆ.

ಸಂಜೆ ಗೆಳತಿಗೆ ಫೋನ್ ಮಾಡಿದಾಗಲೂ ಅಕೆ ಮಳೆಯ ಬಗ್ಗೆ ಹೇಳ್ತಾ ಇದ್ದಳು. ಯಾಕೋ ಏನನ್ನೋ ಕಳೆದುಕೊಂಡಂತೆ......!!!!!

5 comments:

PRAVINA KUMAR.S said...

ಮಳೆ ಬಂದು ಕಡಿಮೆ ಆಯ್ತು. nrpuraಕ್ಕೆ ಬಂದಾಗ ಶಿವಮೊಗ್ಗದಲ್ಲಿ ನಮ್ಮನ್ನು ನೋಡಿಕೊಂಡು ಹೋಗಬಹುದಿತ್ತಲ್ಲ.

Unknown said...

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com

Shree said...

" ಬೆಂಗಳೂರಿನಲ್ಲಿ ನಾವು ಪ್ರೇಮಿಯನ್ನು ಕಾದ ಹಾಗೆ " --
ಈ ಕಾಯುವ ಕೆಲ್ಸ ಬಿಟ್ಟುಬಿಡು ಮಾರಾಯ :)ಬರುವ ಮಳೆ ಬಂದೇ ಬರ್ತದೆ...

Anonymous said...

Well. as shree said. I think it's all about waiting. and that can be really frustrating at times especially because it's helpful to wait for somethings that need to be really optimal.
--------------------------------------------------------
If you think you need to type in Kannada, please use quillpad.in/kannada/ It's going to
make your life so easy, you'll think computers were made for Kannada. Try Quillpad. Put up lot
of blog articles and anything else you may want to do...

dinesh said...

nice writing