
ಬಹಳ ದಿನಗಳ ನಂತರ ನಿರಂತರವಾದ ಬ್ಲಾಗಿಂಗ್ ಮಾಡಲು ಕಾಲಿರಿಸುತ್ತಿರುವುದು ಮನಸ್ಸಿಗೆ ಮುದ ನೀಡಿದೆ. ಕೆಲ ದಿನಗಳ ಹಿಂದೆ ಗೆಳೆಯ ವೇಣುವಿನೋದ್ ಏನು ಬ್ಲಾಗ್ ಮುಂದೆ ಹೋಗ್ತಾನೇ ಇಲ್ಲ ಎಂದು ಕಾಲೆಳೆದಿದ್ದ. ಅಂತೂ ಕೊನೆಗೂ ವಾಪಸ್ ಬಂದಾಗಿದೆ. ಈಗ ಮನದಲ್ಲಿ ಒಂದು ರೀತಿಯ ತಳಮಳ ಆರಂಭವಾಗಿದೆ. ಎಲ್ಲಿಂದ ಆರಂಭಿಸುವುದು ಅನ್ನೋದೇ ಸಮಸ್ಯೆ. ಯಾವುದು ಚೆನ್ನ ಎನ್ನುವ ತಳಮಳ, ಎಲ್ಲವನ್ನೂ ಒಂದೇ ಸಾರಿ ಹಂಚಿ ಕೊಳ್ಳೋದು ಕಷ್ಟ. ಆದರೂ ಒಂದು ಸಂತಸದ ಸುದ್ದಿಯೊಂದಿಗೆ ಆರಂಭಿಸುತ್ತೇನೆ.
ಗೆಳೆಯ ವೇಣುವಿನೋದ್ ಹಿರಿಯ ವರದಿಗಾರನಾಗಿ ಬಡ್ತಿ ಪಡೆದಿದ್ದಾನೆ. ಮಂಗಳೂರು ವರದಿಗಾರನಾಗಿ ಅತ್ಯುತ್ತಮ ಕೆಲಸ ಮಾಡುತ್ತಾ ಅಲ್ಪಾವಧಿಯಲ್ಲಿ ಈ ಸಾಧನೆ ಮಾಡಿದ್ದಕ್ಕಾಗಿ ಆತನಿಗೆ ಅಭಿನಂದನೆ. ಈತನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೆ http://venuvinod.blogspot.com ತಾಣಕ್ಕೆ ಭೇಟಿ ನೀಡಿ.
ಮುಂದಿನ ಬಾರಿ ನನ್ನ ಪ್ರೀತಿಯ ಊರು ಚೇವಾರ್ ಬಗ್ಗೆ ಬರೆಯುತ್ತೇನೆ. ಅದುವರೆಗೆ ವಿರಾಮವಿರಲಿ...
2 comments:
ನಮಸ್ಕಾರ, ಶ್ರೀಲತಾ ಅವರ ಬ್ಲಾಗ್'ನಿಂದ ಇಲ್ಲಿ ಬಂದೆ. ಮಂಗಳೂರಿನವರ? ತುಳು ಬರ್ಪುಂಡ?
ಯಂಕ್ ತುಳು ಗೊತ್ತಿಜ್ಜಿಡ ಅಂಚ ಬರೆಪೆನಾ? ಯಾನ್ ಕಾರ್ಲ (ಕಾರ್ಕಳ)ದಾಲ್. ಅಪ್ಪೆಲ್ಲ್, ಮಾಮಿಲ್ಲ್- ರಡ್ಡಲ ಕಾರ್ಲನೇ. ಈರೆಗ್ ಕಾಸರಗೋಡುಡ್ ಓಲು? ಅಲ್ಪ ಮುಳಿಯಾರ್ ಗೊತ್ತುಂಡ? ಔಲು ಯನ್ನ ಕಸಿನ್ಸ್ ಉಲ್ಲೇರ್.
Post a Comment