Sunday, March 25, 2007

ಮತ್ತೆ ನಿಮಗಿದೋ ಸ್ವಾಗತ

ಹಲವು ದಿನಗಳ ನಂತರ ಮತ್ತೆ ನಿಮ್ಮ ಮುಂದೆ ಬಂದಿದ್ದೇನೆ. ಇನ್ನು ಯಾವುದೇ ಕಾರಣ ನೀಡಿ ತಪ್ಪಿಸುವುದಿಲ್ಲ ಎಂಬ ಭರವಸೆ. ಸುಂದರ ದಿನಗಳು, ಜೀವನದ ಅನುಭವಗಳು, ನೆಚ್ಚಿನ ಪ್ರಯಾಣ ಕಥನ ಮುಂತಾದ ಹಲವು ವಿಷಯಗಳಿಗೆ ವೇದಿಕೆ ನನ್ನ ಈ ಬ್ಲಾಗ್. ಈ ಭುವಿಗೆ ಕಾಲಿರಿಸಿದಂದಿನಿಂದ ಇಂದಿನವರೆಗೆ ಎಷ್ಟೋ ಏರಿಳಿತಗಳನ್ನು ಕಂಡು ಜೀವನ ಸಾಗಿಸಿದ ಬದುಕು ನಮ್ಮದು. ಈ ಅಲ್ಪಾವಧಿಯಲ್ಲಿ ಹಲವಾರು ಬದಲಾವಣೆಗೆ ಮೈಯೊಡ್ಡಿ ನಿಂತ ಜೀವ ನಮ್ಮದು. ಹೀಗೆ ಹಲವಾರು ವಿಚಾರಧಾರೆಗಳಿಗೆ ಕೊಂಡೊಯ್ಯುವ ಕೆಲಸ ನನಗಿರಲಿ ಎನ್ನುತ್ತಾ ವಿರಮಿಸುತ್ತಿದ್ದೇನೆ. ಈ ಬ್ಲಾಗ್ ಬಗ್ಗೆ ನಿಮ್ಮ ಅನಿಸಿಕೆಗಳಿಗೆ ಸ್ವಾಗತ. ಮತ್ತೆ ಶೀಘ್ರದಲ್ಲೇ ಭೇಟಿಯಾಗೋಣ...!!!!!

No comments: