ಇಂದಿಗೆ 25 ವರ್ಷಕ್ಕೆ ಪಾದಾರ್ಪಣೆ. ಅರ್ಥಾತ್ ಎಲ್ಲರೂ ಹೇಳುವಂತೆ ರಜತ ಸಂಭ್ರಮದ ಕಾಲ. ಆದರೆ ನನ್ನ ಪಾಲಿಗೆ ಇದು ಜಸ್ಟ್ ಎನದರ್ ಡೇ. ಸಂಭ್ರಮಿಸುವ ಘಳಿಗೆ ಇನ್ನೂ ಕೂಡಿ ಬಂದಿಲ್ಲ. ಈ ದಿನವನ್ನು ಆಚರಿಸಿದರೆ ಅದು ವಿಶೇಷ ಎನ್ನುವುದು ಏನೂ ಸಂಭವಿಸುವುದಿಲ್ಲ ಎಂದೂ ಗೊತ್ತು. ಹಾಗಂತ ಅದು ವೈರಾಗ್ಯವಲ್ಲ. ಹುಟ್ಟು ಸಾವಿನ ನಡುವಣ ಹಾದಿಯಲ್ಲಿ ಕಳೆಯುವ ೩೬೫ ದಿನಕ್ಕೊಂದರಂತೆ ಒಂದಂಕಿ ಏರಿಕೆ ಮಾತ್ರ.
ಹಿಂದೊಂದು ಕಾಲವಿತ್ತು. ಜೂ.24 ಅಂದರೆ ಸಾಕು ಅದು ಸಂಭ್ರಮದ ಕ್ಷಣ. ಪ್ರತಿ ವರ್ಷವೂ ಜೂನ್ 24 ಅಂದರೆ ದೊಡ್ಡಮ್ಮನ ಕೊಡುಗೆಗಳದ್ದೇ ಕಾರ್ಬಾರು. ಅಂತಹ ಒಂದು ಗಿಫ್ಟ್ ಕೊಡುತ್ತಿದ್ದರು. ಆದರೆ ಯಾವಾಗ ಎಸ್‌ಎಸ್‌ಎಲ್‌ಸಿ ಮುಗಿಯಿತೋ ಅಲ್ಲಿಗೆ ಸಂಭ್ರಮ ಕ್ಷೀಣಿಸಲಾರಂಭಿಸಿತು. ಆ ನಂತರದ ದಿನಗಳಲ್ಲಿ ಪಿಯುಸಿಯಲ್ಲಿ ಕೆಲವರ ಒತ್ತಾಯಕ್ಕೆ, ಪದವಿ ಕಲಿಯುವ ದಿನಗಳಲ್ಲಿ ಪತ್ರಿಕೋದ್ಯಮದ ಹಾದಿ ತೋರಿಸಿಕೊಟ್ಟ ಗೆಳತಿಯ ಒತ್ತಾಸೆಗೆ, ವಿಶ್ವವಿದ್ಯಾನಿಲಯದಲ್ಲಿ ಜೀವದ ಗೆಳತಿಯ ಮುಖದಲ್ಲಿ ಒಂದು ಮಂದಹಾಸವನ್ನು ಕಾಣಲಿಕ್ಕೆ ಬರ್ತ್‌ಡೇ ಇತ್ತು. ಅದಕ್ಕೆ ಅವರು ಟ್ರೀಟ್ ಹೆಸರಲ್ಲಿ ಅಸಲು ಬಡ್ಡಿ ಎರಡನ್ನೂ ಸ್ವೀಕರಿಸುತ್ತಿದ್ದರು ಎನ್ನುವುದೂ ಅಷ್ಟೇ ವಾಸ್ತವ!!!
ಬಹುಶಃ ಇಂತಹ ಕೆಲವು ಸಂಭ್ರಮ ಮತ್ತು ಹಲವರ ಪ್ರಯತ್ನಗಳಿಂದಾಗಿ ಇಂದು ನಾನು ನಾನಾಗಿದ್ದೇನೆ. ಇಲ್ಲದಿದ್ದರೆ ಎಲ್ಲಿ ಕಳೆದು ಹೋಗುತ್ತಿದ್ದೆನೋ ಏನೋ?
ಕಳೆದ 25 ವರ್ಷಗಳಲ್ಲಿ ಏನೆಲ್ಲಾ ಗಳಿಸಿದೆ, ಏನು ನಷ್ಟವಾಯಿತು ಎನ್ನುವುದಕ್ಕಿಂತ ಎಲ್ಲರೂ ನನ್ನ ಸಂತಸಕ್ಕೆ ಅವರ ಪಾಲಿನಿಂದ ಕೆಲವನ್ನು ನನಗೆ ಕೊಟ್ಟರು. ಆ ಕಾರಣಕ್ಕಾಗಿ ನಾನು ಎಲ್ಲರಿಗೂ ಆಭಾರಿ. ಈ 25 ರ ಸಂಭ್ರಮ ಮುಗಿವ ವೇಳೆಗೆ ಯಾರು ಏನಾಗಿರುತ್ತಾರೋ ಯಾರಿಗೆ ಗೊತ್ತು. ಆ ಸಂದರ್ಭ ಅರ್ಥಾತ್ ಮುಂದಿನ ಜೂ. 24 ರ ವೇಳೆಗೆ ನಿಮ್ಮ ಮುಂದೆ ನನ್ನ ಬಗೆಗಿನ ಎಲ್ಲವನ್ನೂ ಬ್ಲಾಗ್ ಅಂಗಣದಲ್ಲಿ ಸುಮ್ಮನೆ ಇಡಬೇಕು ಎನ್ನುವ ಆಶಯವಿದೆ. ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತೀನಿ ಎನ್ನುವುದರ ಬಗ್ಗೆ ನನಗೂ ಸಂದೇಹವಿದೆ.
ಕಳೆದು ಹೋದ 24 ವರ್ಷಗಳು ಬದುಕಿನಲ್ಲಿ ಅದರದ್ದೇ ಆದ ಪಾಠ ಕಲಿಸಿತು.ಬಾಲ್ಯ, ಶಾಲೆ, ಕಾಲೇಜು, ಉದ್ಯೋಗ, ಮುಂದೆ.....?
ಏನೇ ಇರಲಿ ನನ್ನ ಸುಖ, ದುಃಖ, ನೋವು ನಲಿವು, ಕೋಪ ತಾಪ ಎಲ್ಲವನ್ನೂ ಸಹಿಸಿ, ನನ್ನ ಜತೆಗೇ ಇದ್ದು, ದೂರ ಇದ್ದರೂ ಸದಾ ಹಿತಾಶಯವನ್ನೇ ಬಯಸುವ, ಸಮೀಪವಿದ್ದರೂ ಹಾರೈಕೆಗಳಿಂದಲೇ ಶುಭ ಕೋರುವ, ಜೀವನದ ಅವಿಭಾಜ್ಯ ಅಂಗ ಎಂದೇ ಪರಿಗಣಿಸಲ್ಪಟ್ಟ ಕುಟುಂಬದ ಎಲ್ಲ ಸದಸ್ಯರಿಗೂ 24ರ ಅಂತ್ಯದಲ್ಲಿ 25 ರ ಪಾದಾರ್ಪಣೆ ಸಮಯದಲ್ಲಿ ಒಲವು ತುಂಬಿದ ಥ್ಯಾಂಕ್ಸ್.

ನೀವಿರಲು ಜತೆಯಲ್ಲಿ ಬಾಳೆಲ್ಲ ಹಸಿರಾದಂತೆ...
ನಗುತ ನೀವು ಕರೆದರೆ ಮನದಿ ಸಂತೋಷ ಹಾಡಾದಂತೆ...
6 comments:
ಬರಲಿ ಅನುದಿನ ಈ ಶುಭದಿನ...
ಸುಪ್ರಭಾತವಾಗಲಿ ಹರುಷ ...
ಕ್ಷಣ ಕ್ಷಣವೂ ಸಾಧನೆಯ ಹಾದಿಗೆ ನಡೆದ ಹೆಜ್ಜೆ ಮುನ್ನುಡಿಯಾಗಲಿ...
.
ಉಜ್ವಲ ಬದುಕಿಗೆ ಪ್ರೀತಿಯ ಶುಭಾಶಯಗಳು...
ನಿಮಗಿದೋ ಹುಟ್ಟುಹಬ್ಬದ ಶುಭ ಹಾರೈಕೆಗಳು..
-ಧರಿತ್ರಿ
ಧನ್ಯವಾದಗಳು ಧರಿತ್ರಿ ಅವರಿಗೆ.
Well, like I always say.. you have a knack to put every thought of yours poetically... and you make it sound so beautiful. May all your wishes come true.. and may you find every happiness in life...
26ಕ್ಕೆ ಪಾದಾರ್ಪಣೆ ಆಗುವಾಗ ಮತ್ತಷ್ಟು ಸಾಧನೆಯ ಹಿನ್ನೋಟ ಜತೆಯಿರಲಿ
ಶುಭವಾಗಲಿ
ನಿಮಗೆ ಗೆಳೆಯರು ಇಲ್ಲವೇ?
-ಸಿಂಹ
ಸಿಂಹ ನಾಮಧೇಯರಿಗೆ, ಗೆಳೆಯರು ನಿಮಗೆ ಇಲ್ಲವೇ ಎಂಬ ನಿಮ್ಮ ಪ್ರಶ್ನೆಯ ಹಿಂದಿನ ಮರ್ಮ ಅರ್ಥವಾಗುತ್ತಿಲ್ಲ. ನೀವು ಯಾರು ಎಂದು ತಮ್ಮ ಸಂಪೂರ್ಣ ಮಾಹಿತಿ ಒದಗಿಸಿ. ಖಂಡಿತಾ ನಿಮಗೆ ಉತ್ತರಿಸುವೆ. ಅದು ಬಿಟ್ಟು ಅನಾಮಧೇಯ 'ಸಿಂಹ' ಎಂದರೆ ಯಾರೆಂದು ಉತ್ತರಿಸಬೇಕು?
Post a Comment